6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ರಘುನಂದನ್ ಲಾಲ್ ಭಾಟಿಯಾ ನಿಧನ

Update: 2021-05-15 18:07 GMT

ಕೋಲ್ಕತಾ, ಮೇ 15: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಅಮೃತ ಸರದ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ರಘುನಂದನ್ ಲಾಲ್ ಭಾಟಿಯಾ (100) ಅವರು ಅಲ್ಪಕಾಲದ ಅಸೌಖ್ಯದ ಬಳಿಕ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ಶನಿವಾರ ತಿಳಿಸಿದೆ. ರಘುನಂದನ್ ಭಾಟಿಯಾ ಅವರು ಶುಕ್ರವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಪುತ್ರ ರಮೇಶ್ ಭಾಟಿಯಾ, ಪುತ್ರಿ ಸರೋಜ್ ಮಂಜುಳಾ ಹಾಗೂ ಕಿರಿಯ ಸಹೋದರ ಜೆ.ಎಲ್. ಭಾಟಿಯಾ ಅವರನ್ನು ಅಗಲಿದ್ದಾರೆ ಎಂದು ಅದು ತಿಳಿಸಿದೆ. 

ರಘುನಂದನ್ ಭಾಟಿಯಾ ಅವರು 1972ರಲ್ಲಿ ಮೊದಲ ಬಾರಿಗೆ ಅಮೃತಸರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅನಂತರ ಅದೇ ಕ್ಷೇತ್ರದಿಂದ 1980, 1985, 1992, 1996 ಹಾಗೂ 1999ರಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. 2004ರಿಂದ 2008ರ ವರೆಗೆ ಅವರು ಕೇರಳದ ರಾಜ್ಯಪಾಲರಾಗಿದ್ದರು. 2008ರಿಂದ 2009ರ ವರೆಗೆ ಬಿಹಾರದ ರಾಜ್ಯಪಾಲರಾಗಿದ್ದರು. ಇದಲ್ಲದೆ ಅವರು 1992ರಲ್ಲಿ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News