ಉತ್ತರಾಖಂಡ ಗ್ರಾಮದ 151ರಲ್ಲಿ 51 ಮಂದಿಗೆ ಕೊರೋನ ಸೋಂಕು

Update: 2021-05-15 18:22 GMT

ಕೊಟ್ವಾರ್, ಮೇ 15: ಉತ್ತರಾಖಂಡದ ಪೌರಿ ಜಿಲ್ಲೆಯ ಗ್ರಾಮವೊಂದರಲ್ಲಿ 141 ಮಂದಿಯಲ್ಲಿ 51 ಜನರಿಗೆ ಕೊರೋನ ಸೋಂಕು ತಗುಲಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಈ ಗ್ರಾಮವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಅಲ್ಲದೆ ನಿವಾಸಿಗಳನ್ನು ಐಸೋಲೇಶನ್ನಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಪೌರಿ ಏಕೇಶ್ವರ್ ಬ್ಲಾಕ್ನ ಕುರ್ಖ್ಯಾಲ್ ಗ್ರಾಮದ ನಿವಾಸಿಗಳಲ್ಲಿ ಕಳೆದ ಕೆಲವು ಸಮಯದಿಂದ ಕೋವಿಡ್ ರೋಗ ಲಕ್ಷಣವಾದ ಜ್ವರ ಕಂಡು ಬಂದಿತ್ತು. ಪಾಥಿಸೈನ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಇಲಾಖೆಯ ತಂಡ ಮೇ 11ರಂದು ನಿವಾಸಿಗಳ ಮಾದರಿ ಸಗ್ರಹಿಸಿತ್ತು ಎಂದು ಸತ್ಪುಲಿಯ ಉಪ ವಿಭಾಗೀಯ ದಂಡಾಧಿಕಾರಿ ಸಂದೀಪ್ ಕುಮಾರ್ ಹೇಳಿದ್ದಾರೆ. ಶುಕ್ರವಾರ ವರದಿ ಸ್ವೀಕರಿಸಲಾಗಿದ್ದು, ಗ್ರಾಮದ 141 ನಿವಾಸಿಗಳಲ್ಲಿ 51 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಗ್ರಾಮದ ನಿವಾಸಿಗಳನ್ನು ಹೋಮ್ ಐಸೋಲೇಶನ್ನಲ್ಲಿ ಇರಿಸಲಾಗಿದೆ. ವೈದ್ಯಕೀಯ ಕಿಟ್ಗಳನ್ನು ಒಂದಗಿಸಲಾಗಿದೆ. ಅಲ್ಲದೆ, ಈ ಗ್ರಾಮವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News