ಡಿಆರ್‌ಡಿಒ ಅಭಿವೃದ್ದಿಪಡಿಸಿದ ಆ್ಯಂಟಿ-ಕೊರೋನ ಔಷಧಿ ಸೋಮವಾರ ಬಿಡುಗಡೆ

Update: 2021-05-16 15:37 GMT

ಹೊಸದಿಲ್ಲಿ: ರಕ್ಷಣಾ ಸಂಶೋಧನೆ ಹಾಗೂ  ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಆ್ಯಂಟಿ-ಕೊರೋನವೈರಸ್ ಔಷಧಿವನ್ನು ಸೋಮವಾರ ಬಿಡುಗಡೆ ಮಾಡಲಾಗುತ್ತದೆ.  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರ ರಾಜಧಾನಿಯ ಕೆಲವು ಆಸ್ಪತ್ರೆಗಳಿಗೆ ಸುಮಾರು 10,000 ಡೋಸ್‌ಗಳನ್ನು ವಿತರಿಸಲಿದ್ದಾರೆ.

2-ಡಿಯೋಕ್ಸಿ-ಡಿ-ಗ್ಲೂಕೋಸ್ ಅಥವಾ 2-ಡಿಜಿ ಎಂದು ಕರೆಯಲ್ಪಡುವ ಔಷಧಿಯನ್ನು ಹೈದರಾಬಾದ್ ಮೂಲದ ಫಾರ್ಮಾ ದೈತ್ಯ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ ಡಿಆರ್‌ಡಿಒ ಲ್ಯಾಬ್ ಅಭಿವೃದ್ಧಿಪಡಿಸಿದೆ. ದೇಶದ ಉನ್ನತ ಔಷಧ ನಿಯಂತ್ರಕ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತುರ್ತು ಬಳಕೆಗಾಗಿ ಈ ಔಷಧಿಯನ್ನು ಅನುಮೋದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News