ಕೋಡಿಬೆಂಗ್ರೆ ನದಿ ನೀರಿನ ಮಟ್ಟ ಏರಿಕೆ: ಅಪಾಯದಲ್ಲಿ ಮನೆಗಳು

Update: 2021-05-16 16:34 GMT

ಬ್ರಹ್ಮಾವರ, ಮೇ 16: ಚಂಡಮಾರುತದ ಪ್ರಭಾವದಿಂದ ಕೋಡಿಬೆಂಗ್ರೆ ಪರಿಸರದ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದ್ದು, ಇದರಿಂದ ಕೆಲವು ಮನೆಗಳಿಗೆ ಹಾನಿ ಉಂಟಾಗಿದೆ. ಅಲ್ಲದೆ ಹಲವೆಡೆ ತಡೆಗೋಡೆಗಳು ನೀರು ಪಾಲಾಗಿವೆ.

ನದಿ ಅಪಾಯದ ಮಟ್ಟವನ್ನು ಮೀರುತ್ತಿದ್ದು, ಬ್ರಹ್ಮಾವರ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕೋಡಿ ಗ್ರಾಪಂ ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೋಡಿ ಗ್ರಾಪಂ ಸದಸ್ಯರಾದ ವಿನಯ್ ಅಮೀನ್, ಪ್ರಸಾದ್, ಕುಸುಮ ಖಾರ್ವಿ, ಸ್ಥಳೀಯರಾದ ನಾಗರಾಜ್ ಕುಂದರ್, ವಿಶ್ವನಾಥ್ ಶ್ರೀಯಾನ್, ಮನೋಹರ್ ಕುಂದರ್, ಜಯ ಖಾರ್ವಿ, ಗಿರೀಶ್ ಖಾರ್ವಿ, ಚೂಡಾ ಖಾರ್ವಿ, ಸದಾನಂದ ಕುಂದರ್, ಅಶ್ವಥ್ ಅಮೀನ್, ವಿವೇಕ್ ಪುತ್ರನ್, ಯೋಗೀಶ್ ಖಾರ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News