ಉಡುಪಿ: ಭಿಕ್ಷುಕರು, ನಿರ್ಗತಿಕರು, ಕಾರ್ಮಿಕರಿಗೆ ಕೊರೋನ ಪರೀಕ್ಷೆ

Update: 2021-05-16 16:40 GMT

ಉಡುಪಿ, ಮೇ 16: ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಆಶ್ರಯ ಪಡೆದಿ ರುವ ಭಿಕ್ಷುಕರು, ನಿರ್ಗತಿಕರು ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರನ್ನು ಇಂದು ಕೊರೋನ ಪರೀಕ್ಷೆಗೆ ಒಳಪಡಿಸಲಾಯಿತು.

ಹೆಚ್ಚಿನವರಿಗೆ ಕೊರೋನ ಸೋಂಕು ತಗಲಿರುವ ಬಗ್ಗೆ ಸಂಶಯವಿದ್ದು ಅವರಿಂದ ಉಳಿದ ಸಾರ್ವಜನಿಕರಿಗೆ ಹರಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಒಟ್ಟು 70 ಮಂದಿಯ ಗಂಟಲು ದ್ರವದ ಪರೀಕ್ಷೆ ಮಾಡ ಲಾಯಿತು. ಇವರ ವರದಿ ಎರಡು ದಿನಗಳ ನಂತರ ಬರಲಿದೆ.

ಪಾಸಿಟಿವ್ ಬಂದವರಿಗೆ ನಿಗಾ ವಹಿಸಲು ಬೇಕಾದ ಪ್ರತ್ಯೇಕ ವ್ಯವಸ್ಥೆ ಮಾಡ ಲಾಗಿದೆ. ಲಾಕ್‌ಡೌನ್ ಮುಗಿಯುವವರೆಗೆ ಇವರನ್ನು ನೋಡಿ ಕೊಳ್ಳುವ ಜವಾಬ್ದಾರಿಯನ್ನು ಹೋಪ್ ಇಂಡಿಯಾ ಫೌಂಡೇಶನ್ ವಹಿಸಿಕೊಂಡಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News