ಗಂಗಾ ನದಿಯಲ್ಲಿ ಶವಗಳನ್ನು ಎಸೆಯುವುದನ್ನು ತಡೆಗಟ್ಟಲು ಬಿಹಾರ, ಉತ್ತರಪ್ರದೇಶಕ್ಕೆ ಕೇಂದ್ರ ಸೂಚನೆ

Update: 2021-05-16 17:17 GMT

ಹೊಸದಿಲ್ಲಿ:  ವಿನಾಶಕಾರಿ ಕೋವಿಡ್ -19 ರ ಎರಡನೇ ಅಲೆಯ ಮಧ್ಯೆ ನದಿಗಳಲ್ಲಿ ಶವಗಳು ತೇಲುತ್ತಿರುವುದು, ನದಿಯ ಮರಳು ರಾಶಿಯಲ್ಲಿ ಶವವನ್ನು ಮುಚ್ಚಿಹಾಕುವುದು  ಕಂಡುಬರಲಾರಂಭಿಸಿವೆ. ಗಂಗಾ ಮತ್ತು ಅದರ ಉಪನದಿಗಳಲ್ಲಿ ಶವಗಳನ್ನು ಎಸೆಯುವುದನ್ನು ತಡೆಯಲು ಕೇಂದ್ರ ಸರಕಾರವು ಉತ್ತರ ಪ್ರದೇಶ  ಹಾಗೂ  ಬಿಹಾರ ರಾಜ್ಯ ಸರಕಾರಗಳಿಗೆ ರವಿ ವಾರ ನಿರ್ದೇಶನ ನೀಡಿದೆ.

 “ಗಂಗಾದಲ್ಲಿ ಮೃತ ದೇಹಗಳನ್ನು ಎಸೆಯುವುದನ್ನು ತಡೆಗಟ್ಟಲು ಹಾಗೂ  ಅವುಗಳ ಸುರಕ್ಷಿತ ವಿಲೇವಾರಿಗೆ ಗಮನಹರಿಸಲು ಘನತೆಯಿಂದ  ಅಂತ್ಯಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಬೆಂಬಲವನ್ನು ಒದಗಿಸಲು ನಮಾಮಿ ಗಂಗೆ [ಮಿಷನ್] ರಾಜ್ಯಗಳಿಗೆ ನಿರ್ದೇಶನ ನೀಡುತ್ತದೆ” ಎಂದು ಮೇ 15 ಹಾಗೂ 16ರಂದು ನಡೆದ ಪರಿಶೀಲನಾ ಸಭೆಯಲ್ಲಿ, ಕೇಂದ್ರ ಜಲ್ ಶಕ್ತಿ ಸಚಿವಾಲಯವು ತಿಳಿಸಿದೆ.

ಗಂಗಾ ಹಾಗೂ  ಅದರ ಉಪನದಿಗಳಲ್ಲಿ ಭಾಗಶಃ ಸುಟ್ಟ ಅಥವಾ ಕೊಳೆತ ಶವಗಳನ್ನು ಎಸೆಯುವುದು 'ಅತ್ಯಂತ ಅನಪೇಕ್ಷಿತ ಮತ್ತು ಆತಂಕಕಾರಿ' ಎಂದು ಕೇಂದ್ರ ಸರಕಾರ ಹೇಳಿದೆ.

ಮುಖ್ಯ ಕಾರ್ಯದರ್ಶಿಗಳಿಗೆ ಶವಗಳನ್ನು ನದಿಯಲ್ಲಿ ಎಸೆಯುವುದನ್ನು ತಡೆಗಟ್ಟಲು , ಕೋವಿಡ್ -19 ಸಂತ್ರಸ್ತರ ದಹನ ಕುರಿತು ಸರ್ಕಾರದ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಪತ್ರವನ್ನು ಕಳುಹಿಸಲಾಯಿತು. ರಾಜ್ಯಗಳಿಗೆ ಹಣಕಾಸಿನ ನೆರವು ನೀಡಲು ಶವಸಂಸ್ಕಾರ ಮತ್ತು ಸಮಾಧಿಗಳ ದರವನ್ನು ನಿಯಂತ್ರಿಸಲು ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News