‘ಕೋರಮಂಡಲ್ ಟಗ್’ ಸಿಬ್ಬಂದಿ ರಕ್ಷಣೆ ಕಾರ್ಯಾಚರಣೆ: ನಾಲ್ವರು ಎನ್.ಎಂ.ಪಿ.ಟಿ. ಆಸ್ಪತ್ರೆಗೆ ದಾಖಲು

Update: 2021-05-17 07:59 GMT

ಮಂಗಳೂರು, ಮೇ 17: ಕಾಪು ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ‘ಕೋರಮಂಡಲ್ ಎಕ್ಸ್ ಪ್ರೆಸ್ ಟಗ್’ ನಿಂದ ನೌಕಾದಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದ ಒಂಭತ್ತು ಮಂದಿ ಸಿಬ್ಬಂದಿಯ ಪೈಕಿ ಏರ್ ಲಿಫ್ಟ್ ಆದ ನಾಲ್ವರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ ಮೂಲಕ ಎನ್.ಎಂ.ಪಿ.ಟಿ. ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಯಿತು.

ಎಲ್ಲರೂ ಆರೋಗ್ಯವಾಗಿದ್ದಾರೆ. ನಾಲ್ಕು ಮಂದಿಯನ್ನು ಈಗಾಗಲೇ ಎನ್.ಎಂ.ಪಿ.ಟಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐದು ಮಂದಿಯನ್ನು ಕೋಸ್ಟ್ ಗಾರ್ಡ್ ಹಡಗಿನ ಮೂಲಕ ಎನ್.ಎಂ.ಪಿ.ಟಿ. ಬಂದರಿಗೆ ಕಾಪುವಿನಿಂದ ಕರೆತರಲಾಗುತ್ತಿದೆ. ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಿ 24 ಗಂಟೆಗಳ ಕಾಲ ಅವರನ್ನು ನಿಗಾದಲ್ಲಿ ಇರಿಸಿ ಅಗತ್ಯ  ಚಿಕಿತ್ಸೆ ಒದಗಿಸಲಾಗುವುದು. ಈ ವೇಳೆ ಎಲ್ಲರ ಕೋವಿಡ್ ತಪಾಸಣೆಯೂ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಡಾ.ಭರತ್ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ಕು ಮಂದಿಯನ್ನು ಭೇಟಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News