ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ 60 ಆಕ್ಸಿಜನ್ ಕೊನ್ಸನ್ಟ್ರೇಟರ್ ಕೊಡುಗೆ

Update: 2021-05-17 13:42 GMT

ಉಡುಪಿ, ಮೇ 17: ಕೋವಿಡ್-19 ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜಾಪುರ 15, ಗುಲ್ಲರ್ಗಾ ಮತ್ತು ಯಾದ ಗಿರಿಗೆ ತಲಾ 10, ಕೊಪ್ಪಳ 5, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ತಲಾ 10 ಹೀಗೆ ಮೊದಲ ಹಂತದಲ್ಲಿ ಒಟ್ಟು 60 ಆಕ್ಸಿಜನ್ ಕೊನ್ಸನ್ಟ್ರೇಟರ್‌ಗಳನ್ನು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ.ಜಿ.ಶಂರ್ ಕೊಡುಗೆಯಾಗಿ ನೀಡಿದ್ದಾರೆ.

ಮೊದಲ ಹಂತದಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ 60 ಆಕ್ಸಿಜನ್ ಕೊನ್ಸನ್ಟ್ರೇಟರ್ (ಆಮ್ಲಜನಕ ಸಾಂದ್ರಕ)ಗಳನ್ನು ತನ್ನ ಟ್ರಸ್ಟ್ ಮೂಲಕ ಸರಕಾರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಆಕ್ಸಿಜನ್ ಕೊನ್ಸನ್ಟ್ರೇಟರ್ ಪೊರ್ಟೆಬಲ್ ಮೆಶಿನ್ ಆಗಿದ್ದು, ಸುತ್ತಲೂ ಇರುವ ಗಾಳಿಯಿಂದ ಆಮ್ಲಜನಕವನ್ನು ಕೇಂದ್ರೀಕರಿಸಿ ನೀಡುವ ಮೂಲಕ ರೋಗಿಗಳಿಗೆ ಉಪಯೋಗಿಸಲು ಬಹಷ್ಟು ಆರಾಮದಾಯಕವಾಗಿದೆ.

ಪ್ರತೀ ಆಕ್ಸಿಜನ್ ಕೊನ್ಸನ್ಟ್ರೇಟರ್ ವಿಭಿನ್ನ ಪ್ರಮಾಣದಲ್ಲಿ ಗಾಳಿಯನ್ನು ನಿರಂತರವಾಗಿ ಸೆಳೆಯಲಿದ್ದು, ಎಂದಿಗೂ ಆಮ್ಲಜನಕ ಖಾಲಿಯಾಗು ವುದಿಲ್ಲ. ನಿಮಿಷಕ್ಕೆ 7 ರಿಂದ 8 ಲೀಟರ್‌ನಷ್ಟು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಆಮ್ಲಜನಕ ಸಾಂದ್ರಕ, ತುರ್ತು ಸಂದರ್ಭದಲ್ಲಿ ಕೊರೋನ ಪೀಡಿತರಿಗೆ ವರದಾನವಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ 6000 ಲೀಟರ್ ಸಾಮರ್ಥ್ಯದ ಸುಸಜ್ಜಿತ ಅತ್ಯಾಧುನಿಕ ಮಾದರಿಯ ಸಂಪೂರ್ಣ ಸ್ವಯಂ ಚಾಲಿತ ಆಕ್ಸಿಜನ್ ತಯಾರಿಕಾ ಘಟಕ ನಿರ್ಮಿಸಿ ಸರಕಾರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ಘಟಕವು ಸುಮಾರು 60 ಕ್ಕಿಂತಲೂ ಅಧಿಕ ಬೆಡ್‌ಗಳಿಗೆ ಆಕ್ಸಿಜನ್ ಪೂರೈಸುವ ಸಾಮರ್ಥ್ಯ ವನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News