ಉಡುಪಿ: 0-18 ವರ್ಷದ ಮಕ್ಕಳಿಗೆ ಉಚಿತ ಟೆಲಿಕೌನ್ಸೆಲಿಂಗ್ ಸೌಲಭ್ಯ

Update: 2021-05-17 13:56 GMT

ಉಡುಪಿ, ಮೇ 17: ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ರಾಜ್ಯದಲ್ಲಿ ಆಪ್ತ ಸಮಾಲೋಚನೆ ಅಗತ್ಯವಿರುವ 0-18 ವರ್ಷದ ಎಲ್ಲಾ ಮಕ್ಕಳಿಗಾಗಿ ಉಚಿತ ಟೆಲಿಕೌನ್ಸೆಲಿಂಗ್ ನೀಡಲು ಟೋಲ್ ಫ್ರೀ ಸಂಖ್ಯೆ: 14499ನ್ನು ಸ್ಥಾಪಿಸಲಾಗಿದೆ.

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ನಿರ್ಲಕ್ಷಕ್ಕೆ ಒಳಗಾದ, ಪರಿತ್ಯಜಿ ಸಲ್ಪಟ್ಟ,ದೌರ್ಜನ್ಯಕ್ಕೊಳಗಾದ, ಶೋಷಣೆಗೊಳಗಾದ, ಕುಟುಂಬ ದಿಂದ ಬೇರ್ಪಟ್ಟ ಮಕ್ಕಳು ಮತ್ತು ವಿಶೇಷವಾಗಿ ಕೋವಿಡ್-19ರಿಂದ ಬಳಲುತ್ತಿರುವ ಮಕ್ಕಳು ಮತ್ತು ಪೋಷಕರಿಗೆ ಆಪ್ತ ಸಮಾಲೋಚನೆ ಅಗತ್ಯವಿದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂರವಾಣಿ ಸಂಖ್ಯೆ: 0820-2574964 ಅಥವಾ ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ: 1098, ಮಕ್ಕಳ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ:0820-2592229 (ದಿನದ 24 ಗಂಟೆ) ಹಾಗೂ ಉಚಿತ ಟೆಲಿಕೌನ್ಸೆಲಿಂಗ್ ಸಹಾಯವಾಣಿ 14499ಕ್ಕೆ (ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯ ವರೆಗೆ) ಕರೆ ಮಾಡಿ ಆಪ್ತ ಸಮಾಲೋಚನೆ ಸೌಲಭ್ಯ ಪಡೆಯಬಹುದಾಗಿದೆ.

ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡಿರು ವುದರಿಂದ ತಂದೆ, ತಾಯಿ ಇಬ್ಬರೂ ಕೊರೋನಾ ಸೋಂಕಿತರಾದ ಸಂದರ್ಭದಲ್ಲಿ ಅವರ ಮಕ್ಕಳಿಗೆ ಆಶ್ರಯ ನೀಡಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದು, ಗಂಡು ಮಕ್ಕಳಿಗೆ ಉಡುಪಿಯ ಮಿಷನ್ ಕಂಪೌಂಡ್ ಬಳಿಯ ಸಿಎಸ್‌ಐ ಬಾಯ್ಸಿ ಹೋಮ್‌ನಲ್ಲಿ ಹಾಗೂ ಹೆಣ್ಣು ಮಕ್ಕಳಿಗೆ ಸ್ತ್ರೀ ಸೇವಾ ನಿಕೇತನದ ವಸತಿ ಗೃಹದಲ್ಲಿ ಕ್ವಾರಂಟೈನ್ ವ್ಯವಸ್ಥೆಯೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯ ಮಕ್ಕಳು ಕೋವಿಡ್-19 ಅಥವಾ ಯಾವುದೇ ಸಮಸ್ಯೆ ಗಳಿದ್ದಲ್ಲಿ ಕರೆ ಮಾಡಿ ದೂರು ನೀಡುವಂತೆ ಅಥವಾ ಅಗತ್ಯ ಆಪ್ತ ಸಮಾಲೋಚನೆಯನ್ನು ಪಡೆಯುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News