ಉಡುಪಿ : ಮೇ 18ರಮದು ಕೋವ್ಯಾಕ್ಸಿನ್ 2ನೇ ಡೋಸ್ ಲಭ್ಯ

Update: 2021-05-17 16:40 GMT

ಉಡುಪಿ, ಮೇ 17: ಜಿಲ್ಲೆಯಲ್ಲಿ ಮೇ 18ರಂದು ಯಾರಿಗೂ ಕೋವಿಡ್ ಲಸಿಕೆಯ ಪ್ರಥಮ ಡೋಸ್ ನೀಡಲಾಗುವುದಿಲ್ಲ. ಉಡುಪಿ ನಗರ ಪ್ರದೇಶದಲ್ಲಿ ಮಾ.25 ಅಥವಾ ಅದಕ್ಕಿಂತ ಮೊದಲು ಒಂದನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡು 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರಿಗೆ ಮಾತ್ರ ನಗರದ ಐದು ಲಸಿಕಾ ಕೇಂದ್ರಗಳಲ್ಲಿ ನೀಡಲಾಗುತ್ತದೆ.

ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 110 ಡೋಸ್, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 70 ಡೋಸ್, ಎಫ್‌ಪಿಎಐ ಕುಕ್ಕಿಕಟ್ಟೆ ಇಲ್ಲಿ 50 ಡೋಸ್ ಹಾಗೂ ಉಡುಪಿಯ ಬಿ.ಆರ್.ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 70 ಡೋಸ್ ಲಭ್ಯವಿದ್ದು, ಇದನ್ನು ಮೇ 18ರಂದು ನೀಡಲಾಗುವುದು.

ಮಾ.25 ಅಥವಾ ಅದಕ್ಕಿಂತ ಮೊದಲು ಕೋವ್ಯಾಕ್ಸಿನ್ ಲಸಿಕೆ ಪಡೆದು ಕೊಂಡವರಿಗೆ ಈಗಾಗಲೇ ಮೇ 14ರಂದು ಎಸ್‌ಎಂಎಸ್ ಕಳುಹಿಸ ಲಾಗಿದ್ದು, ಎಸ್‌ಎಂಎಸ್ ಸಂದೇಶ ಬಂದಿರುವ ಫಲಾನುಭವಿಗಳು ಮೇಲೆ ತಿಳಿಸಿರುವ ಆಸ್ಪತ್ರೆಗೆ ಬಂದು ಲಸಿಕೆಯನ್ನು ಪಡೆದುಕೊಳ್ಳಬಹುದು.

 ಗ್ರಾಮೀಣ ಪ್ರದೇಶದಲ್ಲಿ ಮಾ.25 ಅಥವಾ ಅದಕ್ಕಿಂತ ಮೊದಲು ಒಂದನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡು 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಆಸ್ಪತ್ರೆ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆದು ಕೊಳ್ಳುವಂತೆ ಡಿಹೆಚ್‌ಓ ಡಾ.ಸುಧೀರ್‌ ಚಂದ್ರ ಸೂಡಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News