ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಗೆ ಅವಧಿ ವಿಸ್ತರಣೆ

Update: 2021-05-17 16:41 GMT

ಉಡುಪಿ, ಮೇ 17: ಮೀನುಗಾರಿಕಾ ಕ್ಷೇತ್ರದ ಸುಸ್ಥಿರ ಮತ್ತು ಜವಾಬ್ದಾರಿ ಯುತ ಬೆಳವಣಿಗೆಗಾಗಿ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯನ್ನು ರೂಪಿಸಿದ್ದು, ಇವುಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 10ರವರೆಗೆ ವಿಸ್ತರಿಸಲಾಗಿದೆ.

ಪ್ರಸ್ತುತ ಸಾಲಿನಲ್ಲಿ ಈ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಾದ ಮೀನು ಕೃಷಿ ಕೊಳಗಳ ನಿರ್ಮಾಣ, ಬೈಯೋಫ್ಲಾಕ್ ಮತ್ತು ಆರ್.ಎ.ಎಸ್ ಘಟಕ ನಿರ್ಮಾಣ, ಮೀನು ಮರಿ ಪಾಲನೆಗೆ ಉತ್ತೇಜನ, ಅಲಂಕಾರಿಕ ಮೀನು ಉತ್ಪಾದನೆ, ಶೈತೀಕರಿಸಿದ ಶಾಖ ನಿರೋಧಕ ವಾಹನ ಖರೀದಿ, ಶೈತ್ಯಾಗಾರ, ಮಂಜುಗಡ್ಡೆ ಸ್ಥಾವರ ನಿರ್ಮಾಣ ಮತ್ತು ನವೀಕರಣ, ಆಳ ಸಮುದ್ರ ಬೋಟ್ ನಿರ್ಮಾಣ, ಹಿನ್ನೀರು ಕೃಷಿ, ಪಂಜರ ಕೃಷಿ, ಮೀನಿನ ಆಹಾರ ಉತ್ಪಾದನಾ ಘಟಕ, ಮೀನು ಮಾರುಕಟ್ಟೆ ಮಳಿಗೆ ನಿರ್ಮಾಣ, ಮೀನುಗಾರಿಕೆ ಬೋಟುಗಳ ಉನ್ನತೀಕರಣ, ಬೋಟಿನಲ್ಲಿ ಬಯೋ ಟಾಯ್ಲೆಟ್ ನಿರ್ಮಾಣ, ಬೋಟಿನಲ್ಲಿ ಸಂಪರ್ಕ ಸಾಧನ ಅಳವಡಿಕೆ, ನಾಡ ದೋಣಿಗಳಿಗೆ ಸೇಫ್ಟಿ ಕಿಟ್ ಖರೀದಿ, ಆಹಾರ ಸುರಕ್ಷತಾ ಯೋಜನೆ ಹಾಗೂ ಇನ್ನಿತರ ಯೋಜನೆಗಳಿಗೆ ರೈತರು, ಮೀನುಗಾರರು ಮತ್ತು ಸಾರ್ವಜನಿಕರಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂ.10ರವೆಗೆ ಸ್ತರಿಸಲಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಮೀನುಗಾರಿಕಾ ಅಧಿಕಾರಿ ಅಥವಾ ಮೀನುಗಾರಿಕೆ ಉಪನಿರ್ದೇಶಕರು, ಬನ್ನಂಜೆ, ಉಡುಪಿ ದೂರವಾಣಿ ಸಂಖ್ಯೆ: 0820-2530444 ಅನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News