ವಿಶ್ವ ಸುಂದರಿ ಸ್ಪರ್ಧೆ : ಉಡುಪಿಯ ಆ್ಯಡ್ಲಿನ್ ಮೂರನೆ ರನ್ನರ್ ಅಪ್

Update: 2021-05-17 17:47 GMT

ಉಡುಪಿ, ಮೇ 17: ಅಮೆರಿಕಾದ ಫ್ಲೋರಿಡಾದ ಹಾಲಿವುಡ್‌ನ ಸೆಮಿ ನೋಲ್ ಹಾರ್ಡ್ ರಾಕ್ ಹೋಟೆಲ್ ಮತ್ತು ಕ್ಯಾಸಿನೊದಲ್ಲಿ ರವಿವಾರ ನಡೆದ 69ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಉಡುಪಿ ಉದ್ಯಾವರ ಮೂಲದ ಆ್ಯಡ್ಲಿನ್ ಕ್ಯಾಸ್ಟೋಲಿನೋ ಮೂರನೇ ರನ್ನರ್ ಅಪ್ ಸ್ಥಾನವನ್ನು ಪಡೆದಿದ್ದಾರೆ.

2020ರ ವಿಶ್ವ ಸುಂದರಿ ಕಿರೀಟ ಮಿಸ್ ಮೆಕ್ಸಿಕೊ ಆಂಡ್ರಿಯಾ ಮೆಜಾ ಪಾಲಾಗಿದ್ದು, ಬ್ರೆಝಿಲ್‌ನ ಜೂಲಿಯಾ ಗಾಮಾ 1ನೇ ರನ್ನರ್ ಅಪ್ ಮತ್ತು ಪೆರುವಿನ ಜಾನಿಕ್ ಮ್ಯಾಸೆಟಾ 2ನೇ ರನ್ನರ್ ಅಪ್ ಸ್ಥಾನವನ್ನು ತನ್ನದಾಗಿಸಿ ಕೊಂಡಿದ್ದಾರೆ.

ಉದ್ಯಾವರ ಮೂಲದ ಅಲ್ಫೋನ್ಸಸ್ ಕ್ಯಾಸ್ಟೆಲಿನೊ ಮತ್ತು ಮೀರಾ ಕ್ಯಾಸ್ಟೆಲಿನೊ ದಂಪತಿ ಪುತ್ರಿಯಾಗಿರುವ 22ರ ಹರೆಯದ ಆ್ಯಡ್ಲಿನ್ ಕ್ಯಾಸ್ಟೋಲಿನೋ ಕುವೈತ್ ನಲ್ಲಿ ಹುಟ್ಟಿ ಬೆಳೆದಿದ್ದು, ಮುಂಬೈಯ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದಿದ್ದಾರೆ.

ವಿವಿಧ ಆನ್‌ಲೈನ್ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, 2019ರಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ನೇರವಾಗಿ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಪ್ರವೇಶ ಪಡೆಯುವ ಅವಕಾಶ ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News