ಟಗ್ ದುರಂತ; ಸಂತ್ರಸ್ಥರಿಗೆ ಪರಿಹಾರ ನೀಡಲು ಇಂಟಕ್ ಆಗ್ರಹ

Update: 2021-05-17 17:22 GMT

ಪಣಂಬೂರು, ಮೇ 17: ನವಮಂಗಳೂರು ಬಂದರು ಕೇಂದ್ರವಾಗಿಸಿ ಎಂಆರ್‌ಪಿಎಲ್‌ಗೆ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುತ್ತಿದ್ದ ಟಗ್ ದುರಂತದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಲು ಇಂಟಕ್ ಆಗ್ರಹಿಸಿದೆ.

ದುರಂತದಲ್ಲಿ ಪಾರಾಗಿ ಬಂದವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಎಂಆರ್‌ಪಿಎಲ್ ಈ ಸಿಬ್ಬಂದಿ ವರ್ಗವನ್ನು ಗುತ್ತಿಗೆ ಕಾರ್ಮಿಕರೆಂದು ಭಾವಿಸದೆ ಮಾನವೀಯ ನೆಲೆಯಲ್ಲಿ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಕುಟುಂಬಕ್ಕೊಂದು ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಚಂಡಮಾರುತ ಬೀಸಲಿದೆ ಎಂದು ಪೂರ್ವಭಾವಿ ಮಾಹಿತಿ ಇದ್ದರೂ ಕಾರ್ಮಿಕರ ಜೀವ ಪಣಕ್ಕಿಟ್ಟದ್ದು ದೊಡ್ಡ ತಪ್ಪು. ಮುಂದೆ ಇಂತಹ ದುರಂತ ಆಗದಂತೆ ಸರಕಾರ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಆಗ್ರಹಿಸಿದರು.
ಈ ಸಂದರ್ಭ ಇಂಟಕ್ ಕಾರ್ಯದರ್ಶಿ ಪಿ.ಕೆ. ಸುರೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News