ನಿರುದ್ಯೋಗ ಹೆಚ್ಚುವುದು ಆರ್ಥಿಕತೆಗೆ ಯಾವುದೇ ರೀತಿಯಲ್ಲಿ ಉತ್ತಮ ಸೂಚ‌ನೆಯಲ್ಲ: ಮಹೇಶ್ ವ್ಯಾಸ್

Update: 2021-05-18 13:16 GMT

ಹೊಸದಿಲ್ಲಿ: ದೇಶದಲ್ಲಿ ವೇತನ ಪಡೆಯುವ ವರ್ಗದ ಸಹಿತ ಇತರ ವರ್ಗಗಳಲ್ಲಿ  ಏರುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಜನರ ಕುಸಿಯುತ್ತಿರುವ ಆದಾಯದಿಂದಾಗಿ ಬೇಡಿಕೆಯಲ್ಲಿ ಕುಸಿತ ಆರ್ಥಿಕತೆಗೆ ಉತ್ತಮವಲ್ಲ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ(ಸಿಎಂಐಇ)ಯ ಆಡಳಿತ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ.

"ನಿರುದ್ಯೋಗದಲ್ಲಿ ಹೆಚ್ಚಳ ಆರ್ಥಿಕತೆಗೆ ಯಾವುದೇ ರೀತಿಯಲ್ಲಿ ಉತ್ತಮ ಸೂಚನೆಯಲ್ಲ,'' ಎಂದು ಹೇಳಿದ ಅವರು ಕಳೆದ ವರ್ಷ ಲಾಕ್ಡೌನ್ ಸಡಿಲಿಕೆಗೊಂಡ ಬೆನ್ನಲ್ಲೇ ಕಾರ್ಮಿಕರ ಕಾಮಗಾರಿಗಳಲ್ಲಿ ಭಾಗವಹಿಸುವಿಕೆ ಪ್ರಮಾಣ ಚೇತರಿಸಿಕೊಂಡಿದ್ದರೂ ಸಂಪೂರ್ಣ ಚೇತರಿಕೆ ದಾಖಲಾಗುವ  ಮುನ್ನವೇ ಮತ್ತೆ ವೇಗ ಕಳೆದುಕೊಂಡಿದೆ,'' ಎಂದು ಅವರು ಅಭಿಪ್ರಾಯ ಪಟ್ಟರು.

ಮಾರ್ಚ್ ತಿಂಗಳಲ್ಲಿ ಶೇ6.5ರಷ್ಟಿದ್ದ  ನಿರುದ್ಯೋಗ ಪ್ರಮಾಣ ಎಪ್ರಿಲಿನಲ್ಲಿ ಶೇ8ಕ್ಕೆ ಏರಿಕೆಯಾಗಿದೆ, ಕಾರ್ಮಿಕರ ಭಾಗವಹಿಸುವಿಕೆ ಪ್ರಮಾಣ (ಎಲ್ಪಿಆರ್) ಈ ಹಿಂದಿನ ಪ್ರಮಾಣಕ್ಕೆ ಹೋಲಿಸಿದಾಗ ಶೇ2ರಷ್ಟು ಕಡಿಮೆಯಾಗಿ ಎಪ್ರಿಲಿನಲ್ಲಿ ಶೇ40ರಷ್ಟಿದೆ. ಇದು ನಮ್ಮ ಜನಸಂಖ್ಯೆಯನ್ನು ಪರಿಗಣಿಸಿದಾಗ ಒಂದು ಗಂಭೀರ ವಿಚಾರ,'' ಎಂದು ವರು ಹೇಳಿದರು.

ಬೇಡಿಕೆಯಲ್ಲಿ ಕುಸಿತ ಪ್ರಗತಿಗೆ ಹಿನ್ನಡೆಯಾಗಿದೆ, ಶೇ90ರಷ್ಟು ಕುಟುಂಬಗಳ ಆದಾಯ ಕುಸಿತಗೊಂಡಿದೆ,'' ಎಂದು ಅವರು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News