ಉಡುಪಿ: ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಲಭ್ಯ

Update: 2021-05-18 15:07 GMT

ಉಡುಪಿ, ಮೇ 18: ಜಿಲ್ಲೆಯಲ್ಲಿ ಮೇ 19ರ ಬುಧವಾರದಂದು ಯಾವುದೇ ಕೋವಿಡ್ ಲಸಿಕೆಯ ಪ್ರಥಮ ಡೋಸ್ ನೀಡಲಾಗುವುದಿಲ್ಲ. ಉಡುಪಿ ನಗರ ಪ್ರದೇಶದಲ್ಲಿ ಮಾರ್ಚ್ 25 ಅಥವಾ ಅದಕ್ಕಿಂತ ಮೊದಲು ಒಂದನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡು 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರಿಗೆ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಡೋಸ್, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40 ಡೋಸ್ ಲಭ್ಯವಿದ್ದು, ಅದನ್ನು ಮೇ 19ರಂದು ನೀಡಲಾಗುವುದು.

ಮಾ.25 ಅಥವಾ ಅದಕ್ಕಿಂತ ಮೊದಲು ಕೋವ್ಯಾಕ್ಸಿನ್ ಲಸಿಕೆ ಪಡೆದು ಕೊಂಡವರಿಗೆ ಈಗಾಗಲೇ ಮೇ 14ರಂದು ಎಸ್‌ಎಂಎಸ್ ಕಳುಹಿಸಲಾಗಿದ್ದು, ಎಸ್‌ಎಂಎಸ್ ಸಂದೇಶ ಬಂದಿರುವ ಫಲಾನುಭವಿಗಳು ಮೇಲೆ ತಿಳಿಸಿರುವ ಆಸ್ಪತ್ರೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಲಸಿಕೆ ಲಭ್ಯತೆಯನ್ನು ಖಚಿತ ಪಡಿಸಿಕೊಂಡು ಆಸ್ಪತ್ರೆಗೆ ಬಂದು ಲಸಿಕೆ ಪಡೆದುಕೊಳ್ಳುವಂತೆ ತಿಳಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಗಳು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News