×
Ad

ಕೊರೋನದಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ, ಲಸಿಕೆ ಕಡಿಮೆಯಾಗುತ್ತಿದೆ: ರಾಹುಲ್ ಗಾಂಧಿ

Update: 2021-05-19 14:16 IST

ಹೊಸದಿಲ್ಲಿ: ಕೇಂದ್ರ ಸರಕಾರವು ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು  ಬುಧವಾರ ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೋವಿಡ್ -19 ನಿಂದಾಗಿ ಸಾವುಗಳು ಹೆಚ್ಚಾಗುತ್ತಿದ್ದರೆ, ಲಸಿಕೆ ನೀಡುವ ಕೆಲಸ ಕಡಿಮೆಯಾಗುತ್ತಿವೆ ಎಂದು ಹೇಳಿದ್ದಾರೆ.

ಕೋವಿಡ್-19 ವ್ಯಾಕ್ಸಿನೇಷನ್‌ಗಳಲ್ಲಿ ಕುಸಿತ ಹಾಗೂ ಕೊರೋನ ವೈರಸ್‌ನಿಂದಾಗಿ ದೈನಂದಿನ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳವನ್ನು ತೋರಿಸುವ ಗ್ರಾಫ್‌ಗಳನ್ನು ಕೂಡ ರಾಹುಲ್  ಅವರು ಹಂಚಿಕೊಂಡರು.

"ಲಸಿಕೆಗಳು ಕಡಿಮೆಯಾಗುತ್ತಿವೆ ಹಾಗೂ  ಕೋವಿಡ್ ಸಾವುಗಳು ಹೆಚ್ಚುತ್ತಿವೆ. ಗಮನವನ್ನು ಬೇರಡೆ ತಿರುಗಿಸುವುದು, ಅಸತ್ಯವನ್ನು ಹರಡುವುದು, ಸತ್ಯಗಳನ್ನು ಮರೆಮಾಚುವ ಮೂಲಕ ಸದ್ದು ಮಾಡಿ ಎನ್ನುವುದು ಕೇಂದ್ರ ಸರಕಾರದ ನೀತಿ’’ ಎಂದು  ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ಭಾರತ ಒಂದೇ ದಿನದಲ್ಲಿ ಕೊರೋನ ವೈರಸ್‌ನಿಂದಾಗಿ 4,529 ಸಾವುನೋವುಗಳನ್ನು ಕಂಡಿದೆ, ಇದರೊಂದಿಗೆ ಕೋವಿಡ್-19ನಿಂದಾಗಿ ಒಟ್ಟು ಸಾವಿನ ಸಂಖ್ಯೆ 2,83,248 ಕ್ಕೆ ತಲುಪಿದೆ. ಆದರೆ 2.67 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯು ಬುಧವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News