ದಲಿತ ನಾಯಕ ರಾಧಾಕೃಷ್ಣನ್ ದೇವಸ್ವಂ ಸಚಿವ: ಕೇರಳದಲ್ಲಿ ಇತಿಹಾಸ ಸೃಷ್ಟಿಸಲಿರುವ ಸಿಪಿಎಂ

Update: 2021-05-19 17:16 GMT

ತಿರುವನಂತಪುರ, ಮೇ 19: ಎರಡನೇ ಅವಧಿಗೆ ಗುರುವಾರ ಪ್ರಮಾಣ ವಚನ ಸ್ವೀಕರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿರುವ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರಕಾರ ದೇವಸ್ವಂನ ಸಚಿವರನ್ನಾಗಿ ದಲಿತ ನಾಯಕರೋರ್ವರನ್ನು ನಿಯೋಜಿಸುವ ಮೂಲಕ ಚರಿತ್ರೆ ಸೃಷ್ಟಿಸಲಿದೆ.

ನೂತನ ಸಂಪುಟದಲ್ಲಿ ಸಿಪಿಎಂನ ಹಿರಿಯ ದಲಿತ ನಾಯಕ ಕೆ. ರಾಧಾಕೃಷ್ಣನ್ ಅವರು ದೇವಸ್ವಂನ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪಿಣರಾಯಿ ಸರಕಾರದ ಈ ಹಿಂದಿನ ಅವಧಿಯಲ್ಲಿ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ದೇವಸ್ವಂ ಖಾತೆ ಬಗ್ಗೆ ವಿವಾದ ಎದ್ದಿತ್ತು.

ಸಿಪಿಎಂನ ಕೇಂದ್ರ ಸಮಿತಿಯ ಸದಸ್ಯರಾಗಿರುವ ರಾಧಾಕೃಷ್ಣನ್ ಅವರು ವಿಧಾನ ಸಭೆ ಚುನಾವಣೆಯಲ್ಲಿ ತ್ರಿಶೂರ್ ಜಿಲ್ಲೆಯ ಚೇಲಕ್ಕರಾ ಕ್ಷೇತ್ರದಿಂದ ಸ್ಪರ್ಧಿಸಿ ಸುಮಾರು 40 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದರು. ರಾಧಾಕೃಷ್ಣನ್ ಅವರು 2006ರಲ್ಲಿ ವಿಧಾನ ಸಭೆಯ ಸ್ಪೀಕರ್ ಹುದ್ದೆಯನ್ನು ನಿರ್ವಹಿಸಿರುವುದಲ್ಲದೆ, ಇ.ಕೆ. ನಾಯನಾರ್ ಸಂಪುಟದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವ್ಯವಹಾರಗಳ ಸಚಿವರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News