ನ್ಯೂಝಿಲ್ಯಾಂಡ್ ಹೈಕಮಿಷನ್ ಸಹಾಯ ಯಾಚಿಸಿದ್ದ ಭಾರತೀಯ ಉದ್ಯೋಗಿ ಕೋವಿಡ್-19ಗೆ ಬಲಿ

Update: 2021-05-20 11:53 GMT
photo: twitter

ಹೊಸದಿಲ್ಲಿ: ನ್ಯೂಝಿಲ್ಯಾಂಡ್ ಹೈಕಮಿಷನ್ ನಲ್ಲಿಕೆಲಸ ಮಾಡುತ್ತಿದ್ದ ಭಾರತೀಯ ಉದ್ಯೋಗಿಯೊಬ್ಬರು  ಕೋವಿಡ್ -19 ನಿಂದಾಗಿ ಮೃತಪಟ್ಟಿದ್ದಾರೆ.

ಸರ್ ಎಡ್ಮಂಡ್ ಹಿಲರಿ ಅವರು ಭಾರತದ ಹೈ ಕಮಿಷನರ್ ಆಗಿದ್ದಾಗ 1986 ರಿಂದ ಮೃತ ಉದ್ಯೋಗಿ ನ್ಯೂಝಿಲೆಂಡ್ ಕಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದರು.

ಮೇ ತಿಂಗಳ ಆರಂಭದಲ್ಲಿ ಯೂತ್ ಕಾಂಗ್ರೆಸ್ ಅನ್ನು ಟ್ಯಾಗ್ ಮಾಡಿದ ಟ್ವೀಟ್ ನಲ್ಲಿ ನ್ಯೂಝಿಲ್ಯಾಂಡ್ ಹೈಕಮಿಷನ್ ಇದೇ ಉದ್ಯೋಗಿಗಾಗಿ ಆಮ್ಲಜನಕವನ್ನು ಕೋರಿತ್ತು. ಇದು ಕೇಂದ್ರ ಸರಕಾರ ಹಾಗೂ ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.

ನೌಕರನ ನಿಧನ ಕುರಿತು ನ್ಯೂಝಿಲ್ಯಾಂಡ್ ನ ವಿದೇಶಾಂಗ ವ್ಯವಹಾರಗಳ ಸಚಿವ ನ್ಯಾನಿಯಾ ಮಹುತಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

"ಹೊಸದಿಲ್ಲಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ನ್ಯೂಝಿಲ್ಯಾಂಡ್ ಹೈಕಮಿಷನ್ ಉದ್ಯೋಗಿಯೊಬ್ಬರು ನಿಧನರಾದ ಬಗ್ಗೆ ನನಗೆ ತುಂಬಾ ಬೇಸರವಾಯಿತು. ಈ ಸಮಯದಲ್ಲಿ ನನ್ನ ಆಲೋಚನೆಗಳು ಅವರ  ಕುಟುಂಬದೊಂದಿಗೆ ಇವೆ" ಎಂದು ನ್ಯೂಝಿಲ್ಯಾಂಡ್ ಸರಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

"ಮೃತ ಉದ್ಯೋಗಿ  1986 ರಲ್ಲಿ ಸರ್ ಎಡ್ಮಂಡ್ ಹಿಲರಿ ಭಾರತಕ್ಕೆ ನಮ್ಮ ಹೈಕಮಿಷನರ್ ಆಗಿದ್ದ ಸಮಯದಲ್ಲಿ ಹೈಕಮಿಷನ್ ಸೇರಿದ್ದರು. ಅವರು ನಮ್ಮ ದೇಶಕ್ಕೆ ನೀಡಿದ ಬೆಂಬಲವನ್ನು ನ್ಯೂಝಿಲ್ಯಾಂಡ್  ನಿಜವಾಗಿಯೂ ಗೌರವಿಸುತ್ತದೆ" ಎಂದು ಹೇಳಿಕೆ ತಿಳಿಸಿದೆ.

ಮೇ 2 ರಂದು, ಹೊಸದಿಲ್ಲಿಯಲ್ಲಿರುವ  ನ್ಯೂಝಿಲ್ಯಾಂಡ್  ಹೈಕಮಿಷನ್, ಆಕ್ಸಿಜನ್ ಸಿಲಿಂಡರ್‌ಗಳಿಗೆ 'ತುರ್ತು' ಸಹಾಯಕ್ಕಾಗಿ ಯುವ ಕಾಂಗ್ರೆಸ್  ಅಧ್ಯಕ್ಷ ಶ್ರೀನಿವಾಸ್ ಬಿ.ವಿ.ಗೆ ಟ್ವಿಟರ್‌ನಲ್ಲಿ ಎಸ್‌ಒಎಸ್ ಸಂದೇಶವನ್ನು ನೀಡಿತ್ತು.  ಆದರೆ ತಕ್ಷಣವೇ ತನ್ನ ಟ್ವೀಟನ್ನು ಅಳಿಸಿಹಾಕಿತ್ತು. ಆದರೆ ಅಷ್ಟೊತ್ತಿಗೆ ಶ್ರೀನಿವಾಸ್ ಅವರ ತಂಡ ಆಕ್ಸಿಜನ್ ಸಿಲಿಂಡರ್  ಅನ್ನು ಹೈಕಮಿಷನ್ ಕಚೇರಿಗೆ  ಕಳುಹಿಸಿಕೊಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News