×
Ad

ಆಮ್ಲಜನಕ ಸಾಂದ್ರಕಗಳ ಬೆಲೆ ನಿಗದಿಗೆ ನೀತಿಯನ್ನು ಏಳು ದಿನಗಳಲ್ಲಿ ಅಂತಿಮ: ದಿಲ್ಲಿ ಹೈಕೋರ್ಟ್ಗೆ ತಿಳಿಸಿದ ಕೇಂದ್ರ

Update: 2021-05-20 23:44 IST

ಹೊಸದಿಲ್ಲಿ,ಮೇ 20: ಆಮ್ಲಜನಕ ಸಾಂದ್ರಕಗಳ ಬೆಲೆಗಳ ನಿಯಂತ್ರಣ ಕುರಿತು ಗೊಂದಲ ಮತ್ತು ಊಹಾಪೋಹಗಳ ನಡುವೆಯೇ ನರೇಂದ್ರ ಮೋದಿ ಸರಕಾರವು ಆಮ್ಲಜನಕ ಸಾಂದ್ರಕಗಳ ಬೆಲೆ ನಿಗದಿ ಪ್ರಕ್ರಿಯೆಗೆ ತಾನು ಚಾಲನೆ ನೀಡಿರುವುದಾಗಿ ಗುರುವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಸಂಬಂಧ ರಾಷ್ಟ್ರೀಯ ಔಷಧಿ ಬೆಲೆ ನಿಗದಿ ಪ್ರಾಧಿಕಾರವು ಗುರುವಾರ ಉದ್ಯಮ ಪಾಲುದಾರರೊಡನೆ ಸಭೆಯೊಂದನ್ನು ನಡೆಸಿದ್ದು,ಏಳು ದಿನಗಳಲ್ಲಿ ಬೆಲೆ ನಿಗದಿಗೆ ಸೂತ್ರವೊಂದನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಕೇಂದ್ರವು ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೇಳಿದೆ.

ದಿಲ್ಲಿ ನಿವಾಸಿ ಮನೀಷ್ ಚೌಹಾಣ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರಕಾರವು ಈ ಅಫಿಡವಿಟ್ ಅನ್ನು ದಾಖಲಿಸಿದೆ. ಕೋವಿಡ್-19 ಚಿಕಿತ್ಸೆಗೆ ಅಗತ್ಯವಾಗಿರುವ ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಮಾರಾಟವನ್ನು ಅವರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಆಮ್ಲಜನಕ ಸಾಂದ್ರಕಗಳು ಮತ್ತು ಥರ್ಮಲ್ ಸ್ಕಾನರ್ಗಳನ್ನು ಕಾನೂನಿನಡಿ ‘ಅಗತ್ಯ ಸರಕುಗಳು ’ಎಂದು ಘೋಷಿಲಾಗಿಲ್ಲ, ಹೀಗಾಗಿ ತನ್ನ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದು ಆಮ್ಲಜನಕ ಸಾಂದ್ರಕಗಳ ದಾಸ್ತಾನು ಮತ್ತು ಕಾಳಸಂತೆ ಪ್ರಕರಣದಲ್ಲಿ ಬಂಧಿತನಾಗಿರುವ ದಿಲ್ಲಿಯ ಉದ್ಯಮಿ ನವನೀತ ಕಾಲ್ರಾ ವಾದಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News