×
Ad

ಐಬಿಸಿಯಡಿ ವೈಯಕ್ತಿಕ ಖಾತರಿದಾರರಿಂದ ಸಾಲ ವಸೂಲಿಗೆ ಕೇಂದ್ರದ ಅಧಿಸೂಚನೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2021-05-21 23:13 IST

ಹೊಸದಿಲ್ಲಿ,ಮೇ 21: ಋಣಬಾಧ್ಯತೆ ಮತ್ತು ದಿವಾಳಿ ಸಂಹಿತೆ(ಐಬಿಸಿ)ಯಡಿ ಕಂಪನಿಗಳಿಗೆ ನೀಡಿರುವ ಸಾಲಗಳನ್ನು ವೈಯಕ್ತಿಕ ಖಾತರಿದಾರರಿಂದ ವಸೂಲು ಮಾಡಲು ಬ್ಯಾಂಕುಗಳಿಗೆ ಅನುಮತಿ ನೀಡಿ ಕೇಂದ್ರ ಸರಕಾರವು 2019,ನ.15ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಎತ್ತಿ ಹಿಡಿದಿದೆ.

ಐಬಿಸಿಯಡಿ ತೀರುವಳಿ ಪ್ರಕ್ರಿಯೆಗೆ ಅನುಮತಿಯು ವೈಯಕ್ತಿಕ ಖಾತರಿದಾರರನ್ನು ಬ್ಯಾಂಕುಗಳಿಗೆ ಅವರ ಸಾಲಬಾಧ್ಯತೆಗಳಿಂದ ಮುಕ್ತಗೊಳಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಎಸ್.ರವೀಂದ್ರ ಭಟ್ ಅವರ ಪೀಠವು ಸ್ಪಷ್ಟಪಡಿಸಿತು.

 ಅಧಿಸೂಚನೆಯ ಸಿಂಧುತ್ವವನ್ನು ಪ್ರಸ್ನಿಸಿ ಸುಮಾರು 75 ಅರ್ಜಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News