×
Ad

ಪ.ಬಂಗಾಳ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆ ಗಾಬರಿಯಿಂದ ಹೊರಗೋಡಿದ ಕೊರೋನ ರೋಗಿಗಳು

Update: 2021-05-21 23:31 IST

ಕೋಲ್ಕತಾ, ಮೇ 21: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಆಸ್ಪತ್ರೆಯೊಂದರಲ್ಲಿ ಆಮ್ಲಜನಕ ಸೋರಿಕೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದ ಕೋವಿಡ್ ರೋಗಿಗಳು ಹಾಗೂ ಅವರ ಕುಟುಂಬದವರು ಆತಂಕಕ್ಕೆ ಒಳಗಾದರು. ಕೆಲವು ರೋಗಿಗಳು ಗಾಬರಿಯಿಂದ ಹೊರಗೋಡಿದರು ಎಂದು ವರದಿಯಾಗಿದೆ.

ಸಿಲಿಗುರಿಯ ನಾರ್ಥ್ ಬೆಂಗಾಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 9:15ರ ವೇಳೆಗೆ ಕೋವಿಡ್ ರೋಗಿಗಳಿದ್ದ ತೀವ್ರನಿಗಾ ಘಟಕಕ್ಕೆ ವಿಭಾಗಕ್ಕೆ ಆಮ್ಲಜನಕ ಪೂರೈಸುತ್ತಿದ್ದ ಪೈಪ್ನಲ್ಲಿ ಆಮ್ಲಜನಕ ಸೋರಿಕೆಯಾಗುತ್ತಿರುವುದು ಪತ್ತೆಯಾಗಿದೆ. ಸೋರಿಕೆಯಾದ ಆಮ್ಲಜನಕ ಹಾಲ್ನಲ್ಲಿ ತುಂಬಿಕೊಂಡಾಗ ಅಲ್ಲಿದ್ದ ರೋಗಿಗಳು ಹಾಗೂ ಅವರ ಕುಟುಂಬದವರು ಬೆಂಕಿ ಅನಾಹುತವಾಗಿದೆ ಎಂದು ಭಾವಿಸಿ ಗಾಭರಿಗೊಂಡು ಅಲ್ಲಿಂದ ಹೊರಗೋಡಿದರು. ಇದೇ ವೇಳೆ ಗದ್ದಲ, ಗಡಿಬಿಡಿ ನೋಡಿ ಆ ಕಡೆ ಎಲ್ಲರೂ ಧಾವಿಸಿದಾಗ ಜನಸಂದಣಿಯಾಗಿ ಆತಂಕಕ್ಕೆ ಕಾರಣವಾಯಿತು ಎಂದು ಆಸ್ಪ್ರತೆಯ ಅಧೀಕ್ಷಕ ಡಾ. ಸಂಜಯ್ ಮಲಿಕ್ ಹೇಳಿದ್ದಾರೆ.

ಬಳಿಕ ಅಗ್ನಿಶಾಮಕ ದಳದ ಎರಡು ಯಂತ್ರಗಳು ಕಾರ್ಯಾಚರಣೆ ನಡೆಸಿ, ಕೆಲಕಾಲ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿ ಪೈಪ್ನಲ್ಲಿದ್ದ ದೋಷವನ್ನು ಸರಿಪಡಿಸಿದರು . ತೀವ್ರನಿಗಾ ಘಟಕದಲ್ಲಿದ್ದ 7 ರೋಗಿಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ . ಘಟನೆಯಲ್ಲಿ ಯಾರಿಗೂ ಗಾಯವಾದ ಅಥವಾ ಯಾವುದೇ ರೀತಿಯ ನಷ್ಟವಾದ ಬಗ್ಗೆ ವರದಿಯಾಗಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News