ಕೋವಿಡ್‍ನ 'Indian Variant' ಪದ ತೆಗೆದುಹಾಕುವಂತೆ ಸೋಶಿಯಲ್ ಮೀಡಿಯಾ ಕಂಪೆನಿಗಳಿಗೆ ಭಾರತ ಸರಕಾರದ ಸೂಚನೆ

Update: 2021-05-22 15:54 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: 'Indian Variant' ಆಫ್ ಕೊರೋನಾವೈರಸ್ ಎಂಬ ಉಲ್ಲೇಖ ಹೊಂದಿರುವ ಎಲ್ಲಾ ವಿಷಯಗಳನ್ನು  ಸಾಮಾಜಿಕ  ಜಾಲತಾಣಗಳಿಂದ ತಕ್ಷಣ ತೆಗೆದು ಹಾಕುವಂತೆ ಭಾರತ ಸರಕಾರವು ಸಾಮಾಜಿಕ ಜಾಲತಾಣ ಕಂಪೆನಿಗಳಿಗೆ ಸೂಚಿಸಿದೆ. ಕೋವಿಡ್-19 ಕುರಿತಂತೆ ಅಪಪ್ರಚಾರ ತಡೆಯುವ ಉದ್ದೇಶದಿಂದ ಈ ಸೂಚನೆ ನೀಡಲಾಗಿದೆ ಎಂದು ಭಾರತ ಸರಕಾರ ಹೇಳಿದೆ.

ಶುಕ್ರವಾರ ಭಾರತ ಸರಕಾರದ ಐಟಿ ಸಚಿವಾಲಯ  ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ  ಪತ್ರ ಬರೆದು, ಬಿ.1617 ಕೊರೋನಾ ರೂಪಾಂತರಿಯನ್ನು 'Indian Variant' ಎಂದು  ವಿಶ್ವ ಆರೋಗ್ಯ ಸಂಸ್ಥೆ ತನ್ನ ಯಾವುದೇ  ವರದಿಗಳಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಿದೆ.

ಜಗತ್ತಿನ ಇತರ ದೇಶಗಳಲ್ಲಿ ಕೊರೋನವೈರಸ್‍ನ ``Indian Variant''  ವ್ಯಾಪಿಸುತ್ತಿದೆ ಎಂಬರ್ಥ ನೀಡುವ `ಸುಳ್ಳು ಹೇಳಿಕೆಗಳು' ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು  ಸಚಿವಾಲಯ ಹೇಳಿದೆ.

ಕೋವಿಡ್ ಸಂಬಂಧಿಸಿದಂತೆ ನಕಲಿ ಸುದ್ದಿ/ಮಾಹಿತಿಗಳನ್ನು ನಿಯಂತ್ರಿಸುವಂತೆ ಈ ಹಿಂದೆ ಭಾರತ ಸರಕಾರದ ಐಟಿ ಸಚಿವಾಲಯ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News