×
Ad

ರಾಜೀವ್‌ ಗಾಂಧಿ ʼನವಭಾರತದ ಶಿಲ್ಪಿʼ ಎಂದು ಟ್ವೀಟಿಸಿ ಡಿಲೀಟ್‌ ಮಾಡಿದ ಜೋತಿರಾದಿತ್ಯ ಸಿಂಧ್ಯ

Update: 2021-05-22 23:35 IST

ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆ ದಿನದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಜೋತಿರಾದಿತ್ಯ ಸಿಂಧ್ಯ ರಾಜೀವ್‌ ಗಾಂಧಿಯವರ ಕುರಿತು ʼಆಧುನಿಕ ಭಾರತದ ಶಿಲ್ಪಿʼ ಎಂದು ಟ್ವೀಟ್‌ ಮೂಲಕ ಬಣ್ಣಿಸಿದ್ದು ಬಳಿಕ ಬಿಜೆಪಿ ನಾಯಕರ ಸಲಹೆಯ ಮೇರೆಗೆ ಅದನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಜೋತಿರಾದಿತ್ಯ ಸಿಂಧ್ಯರವರ ತಂದೆ ಮಾಧವರಾವ್‌ ಸಿಂಧ್ಯ 2001ರ ತಮ್ಮ ನಿಧನದವರೆಗೂ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಮುಖರಾಗಿದ್ದರು. ಶುಕ್ರವಾರ ಟ್ವೀಟ್‌ ಮಾಡಿದ್ದ ಅವರು "ಆಧುನಿಕ ಭಾರತದ ವಾಸ್ತುಶಿಲ್ಪಿ ಭಾರತ ರತ್ನ, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ನಿಧನ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ” ಎಂದು ಟ್ವೀಟ್‌ ಮಾಡಿದ್ದರು. ಆದರೆ ಅವರ ಆ ಟ್ವೀಟನ್ನು ಅಳಿಸಿ ಹಾಕಿದ್ದು ಹಲವರನ್ನು ಅಚ್ಚರಿಗೀಡು ಮಾಡಿದೆ.

ಟ್ವೀಟ್‌ ಅಳಿಸಿದ ಬಳಿಕ ನೂತನ ಭಾರತದ ಶಿಲ್ಪಿ ಹಾಗೂ ಭಾರತರತ್ನ ಎಂಬ ಪದಗಳನ್ನು ತೆಗೆದು "ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ನಿಧನ ವಾರ್ಷಿಕದಂದು ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ" ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News