ಎಂಆರ್‌ಪಿಎಲ್ ಉದ್ಯೋಗ : ಸ್ಥಳೀಯರಿಗೆ ಆದ್ಯತೆ ನೀಡಲು ಮುಸ್ಲಿಮ್ ಒಕ್ಕೂಟ ಮನವಿ

Update: 2021-05-23 12:17 GMT

ಮಂಗಳೂರು, ಮೇ 23: ಎಂಆರ್‌ಪಿಎಲ್ ಕಂಪೆನಿಯ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೆ ಹೊರ ರಾಜ್ಯದವರಿಗೆ ಅವಕಾಶ ಕಲ್ಪಿಸಿರುವ ಸಂಸದರು, ಶಾಸಕರು ಹಾಗೂ ಎಂಆರ್‌ಪಿಎಲ್ ಕಂಪೆನಿಯ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಸ್ಥಳೀಯರಿಗೆ ಆದ್ಯತೆ ನೀಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಈ ಮಹತ್ತರ ಯೋಜನೆಗೆ ಭೂಮಿ ನೀಡಿದವರನ್ನೇ ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಯೋಜನೆಯಿಂದ ಭವಿಷ್ಯದಲ್ಲಿ ತಮಗೆ ಪ್ರಯೋಜನ ವಾಗಬಹುದು, ಉದ್ಯೋಗ ಸಿಗಬಹುದು ಎಂಬ ಕನಸು ಕಂಡಿದ್ದ ಸ್ಥಳೀಯರಿಗೆ ಸರಕಾರ ಅನ್ಯಾಯ ಎಸಗಿದೆ. ನೇಮಕಾತಿಯಲ್ಲಿ ಅವ್ಯವಹಾರ ವಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಸಂಸದರು ಈ ಬಗ್ಗೆ ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News