2020ನೇ ಇಸವಿಯ ಅಂತ್ಯದೊಳಗೆ ನಗರ ಪ್ರದೇಶಗಳ ಶೇ.33ರಷ್ಟು ಮಂದಿ ಸೋಂಕಿತರಾಗಿದ್ದರು: ತಜ್ಞರ ಅಂದಾಜು

Update: 2021-05-23 17:17 GMT

ಹೈದರಾಬಾದ್, ಮೇ 22: 2020ನೇ ಇಸವಿಯ ಅಂತ್ಯದೊಳಗೆ ಭಾರತದಲ್ಲಿ ಶೇ.33ರಷ್ಟು ನಗರ ನಿವಾಸಿಗಳು ಕೊರೋನ ವೈರಸ್ ಸೋಂಕಿತರಾಗಿದ್ದರೆಂದು ತಜ್ಞರು ಅಂದಾಜಿಸಿದ್ದಾರೆ.

2020ರ ಡಿಸೆಂಬರ್‌ ವರೆಗೆ ದೇಶದ 12 ನಗರಗಳಲ್ಲಿ ಶೇ. 31 ಮಂದಿಯಲ್ಲಿ ಸಾರ್ಸ್-ಕೊವ್ 12ನಡೆಸಲಾದ ಕೋವಿಡ್-19 ಸೊರೋಲಜಿ (ರಕ್ತ ಸಾರ ದತ್ತಾಂಶ ಅಧ್ಯಯನದ ಮೂಲಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
 
ಕೋವಿಡ್-19 ಸಾಂಕ್ರಾಮಿಕದ ಎರಡನೆ ಅಲೆಯಲ್ಲಿ ಕೊರೋನ ಸೆರೋಪಾಸಿಟಿವಿಯ ಪ್ರಮಾಣವು ಮೊದಲ ಅಲೆಗಿಂತ ಶೇ.31ರಷ್ಟು ಅಧಿಕವಾಗಿದ್ದು, ಇದು ವರದಿಯಾದ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆಗಿಂತ ನಾಲ್ಕು ಪಟ್ಟು ಅಧಿಕವಾಗಿದೆ. ರಕ್ತದ ಪರೀಕ್ಷೆ ನಡೆಸಿದಾಗ ನಿರ್ದಿಷ್ಟ ರೋಗದ ವಿರುದ್ಧ ಹೋರಾಡುವ ಪ್ರತಿಕಾಯಗಳು ಇರುವುದು ಪತ್ತೆಯಾದಲ್ಲಿ ಅದನ್ನು ಸೆರೊಪಾಸಿಟಿವಿಟಿ ಎಂದು ಕರೆಯಲಾಗುತ್ತದೆ.

ದೇಶಾದ್ಯಂತ ವಿವಿಧ ನಗರಗ ಖಾಸಗಿ ಲ್ಯಾಬ್ಗಳ ಮೂಲಕ ಸಂಗ್ರಹಿಸಲಾದ 4.4 ಲಕ್ಷ ಸ್ಯಾಂಪಲ್ಗಳ ಅಧ್ಯಯನ ನಡೆಸಿ ಈ ವರದಿಯನ್ನು ತಯಾರಿಸಲಾಗಿದೆ. ಈ ವರದಿಯ ಪ್ರಕಾರ ವಿಶಾಖಪಟ್ಟಣಂನಲ್ಲಿ ಪರೀಕ್ಷೆಗೊಳಗಾದ ಶೇ.33.8 ರಷ್ಟು ಮಂದಿಯಲ್ಲಿ ಕೋವಿಡ್-19 ಪ್ರತಿಕಾಯಗಳು ಪತ್ತೆಯಾಗಿವೆ.

ಜಾಗತಿಕ ಆರೋಗ್ಯ ಸಂಶೋಧನಾ ಕೇಂದ್ರ, ಕೆನಡದ ಟೊರಾಂಟೊ ವಿವಿಯ ಸಂಶೋಧಕರು ಹಾಗೂ ಎ. ವೇಲುಮಣಿ ಹಾಗೂ ಥೈರೋಕೇರ್ ಲ್ಯಾಬ್ನ ಸಿ.ನಿಕಮ್ ಹಾಗೂ ವೇಲುಮಣಿ ಈ ಅಧ್ಯಯನವನ್ನು ನಡೆಸಿದ್ದರು.

ಇಡೀ ದೇಶದಲ್ಲಿ ಸಂಗ್ರಹಿಸಲಾದ 2200 ಸ್ಯಾಂಪಲ್ಗಳಲ್ಲಿ ಶೇ.31 ವಯಸ್ಕರಲ್ಲಿ ಸಾರ್ಸ್-ಕೋವ್-2 ಪ್ರತಿಕಾಯಗಳು ಸೆರೊಪಾಸಿಟಿವ್ ಆಗಿರುವುದು ಪತ್ತೆಯಾಗಿದೆ ಎಂದು ವರದಿ ಹೇಳಿದೆ.

ಸೆರೊಪಾಸಿಟಿವಿಟಿಯು ಎಲ್ಲಾ ವಯೋಮಾನದವರಲ್ಲಿಯೂ ಸೆರೊಪಾಸಿಟಿವಿಟಿಯು ಪುರುಷರಿಗಿಂತ (ಶೇ.30) ಮಹಿಳೆಯರಲ್ಲೇ (ಶೇ.35)ಅಧಿಕ ವಾಗಿರುವುದನ್ನು ಕೂಡಾ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News