ಪಡುಬಿದ್ರಿ: ಒಂಟೆ ಸವಾರಿ ನಡೆಸುತಿದ್ದ ಕುಟುಂಬಕ್ಕೂ ಲಾಕ್‍ಡೌನ್ ಎಫೆಕ್ಟ್

Update: 2021-05-28 17:08 GMT

ಪಡುಬಿದ್ರಿ: ಕೊರೋನ ವೈರಸ್ ಎರಡನೇ ಅಲೆಯ ಬಳಿಕ ಉಂಟಾದ ಲಾಕ್‍ಡೌನ್‍ನಿಂದ ಹಲವು ಮಂದಿ ಸಮಸ್ಯೆ ಅನುಭವಿಸುತಿದ್ದಾರೆ. ಅದರಲ್ಲೂ ಪ್ರವಾಸಿ ತಾಣಗಳಿಗೆ ಬರುವವರೇ ಇಲ್ಲ. ಪ್ರವಾಸಿ ತಾಣಗಳನ್ನೇ ನೆಚ್ಚಿಕೊಂಡು ಬದುಕುತಿದ್ದ ಕುಟುಂಬವೂ ಈಗ ಬೀದಿ ಪಾಲಾಗುತ್ತಿದೆ.

ಈತನ ಹೆಸರು ಕಿಶೋರ್. ರಾಜಸ್ಥಾನ ಮೂಲದವನು. ಈತ ಪಣಂಬೂರು ಬೀಚ್‍ನಲ್ಲಿ ದಿನನತ್ಯ ಪ್ರವಾಸಿಗರನ್ನು ಒಂಟೆ ಸವಾರಿ ನಡೆಸಿ ತನ್ನ ಕುಟುಂಬವನ್ನು ಸಾಕುತಿದ್ದು, ಲಾಕ್‍ಡೌನ್‍ನಿಂದ ಕುಟುಂಬ ಸಾಕುವುದು ಮಾತ್ರವಲ್ಲ ಒಂಟೆಯನ್ನು ಸಾಕುವುದಕ್ಕೂ ಕಷ್ಟವಾಗಿದೆ. ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಪ್ರವಾಸಿಗರನ್ನೆ ನಂಬಿ ಬದುಕು ಕಂಡಿದ್ದೆ. ಸಮುದ್ರ ತೀರದಲ್ಲಿ ಪ್ರವಾಸಿಗಳಿಲ್ಲದೆ ಒಂಟೆಗಳ ಆಹಾರಕ್ಕೂ ಪರದಾಡುವಂತಾಗಿದ್ದು ರಸ್ತೆಯ ಪಕ್ಕದಲ್ಲಿದ್ದ ಸೊಪ್ಪುಗಳನ್ನು ತಿನಿಸಿ ತೃಪ್ತಿ ಪಡಬೇಕಾಗಿದೆ ಎಂದು ಅಳಲನ್ನು ತೋಡಿಕೊಂಡಿದ್ದಾನೆ. 

ಪಣಂಬೂರಿನಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರ್ಮಾಳು ಸಮೀಪ ಒಂಟೆಯೊಂದಿಗೆ ಮಲ್ಪೆ ಕಡೆ ತೆರಳುತಿದ್ದಾಗ ವಾರ್ತಾಭಾರತಿಯೊಂದಿಗೆ ಈ ರೀತಿ ಮಾತನಾಡಿದನು.

ಕಳೆದ ನಾಲ್ಕು ವರ್ಷಗಳಿಂದ ಪಣಂಬೂರಿನಲ್ಲಿ ಒಂಟೆ ಸವಾರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಲಾಕ್ಡೌನ್ ನಿಂದಾಗಿ ಬಹಳಷ್ಟು ಸಮಸ್ಯೆಗೊಳಗಾಗಿದೆ. ಸುಮಾರು ರೂ. 500 ರಷ್ಟು ಒಂಟೆಯ ದಿನ ಖರ್ಚು ತಗುಲುತ್ತಿವೆ. ಇದರಿಂದಾಗಿ ಒಂಟೆಯ ಆಹಾರಕ್ಕೂ ಪರದಾಡುವಂತಾಗಿದೆ. ಮಲ್ಪೆಯಲ್ಲಿರುವ ತಮ್ಮವರ ಬಳಿ ನಡೆದುಕೊಂಡು ದಾರಿ ಸಾಗುವುದಾಗಿ ತಿಳಿಸಿದ್ದು, ದಾನಿಗಳಿಂದ ಸಹಾಯ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News