ಫ್ಲೋರಿಡಾ:ಗುಂಡಿನ ದಾಳಿಗೆ ಇಬ್ಬರು ಮೃತ್ಯು,20 ಕ್ಕೂ ಹೆಚ್ಚುಮಂದಿಗೆ ಗಾಯ
Update: 2021-05-30 17:24 IST
ಹೀಲಾಹ್: ದಕ್ಷಿಣ ಫ್ಲೋರಿಡಾದ ಔತಣಕೂಟ ಸಭಾಂಗಣದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಂದಾಜು 20 ರಿಂದ 25 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಯಾಲಿಯಾ ಬಳಿಯ ವಾಯುವ್ಯ ಮಿಯಾಮಿ-ಡೇಡ್ ಕೌಂಟಿಯ ಎಲ್ ಮುಲಾ ಔತಣಕೂಟದಲ್ಲಿ ರವಿವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಸಂಗೀತ ಕಚೇರಿಗಾಗಿ ಔತಣಕೂಟ ಸಭಾಂಗಣವನ್ನು ಬಾಡಿಗೆಗೆ ನೀಡಲಾಗಿತ್ತು. ಮೂರು ಜನರು ಕಾರಿನಿಂದ ಹೊರಬಂದರು ಹಾಗೂ ಹೊರಗಿನ ಗುಂಪಿನ ಮೇಲೆ ಗುಂಡು ಹಾರಿಸಿದರು ಎಂದು ಪೊಲೀಸ್ ನಿರ್ದೇಶಕ ಆಲ್ಫ್ರೆಡೋ ರಾಮಿರೆಜ್ ತಿಳಿಸಿದ್ದಾರೆ.
"ಇದು ಗನ್ ಹಿಂಸಾಚಾರದ ಹೇಯ ಕೃತ್ಯ, ಹೇಡಿತನದ ಕೃತ್ಯ" ಎಂದು ರಾಮಿರೆಜ್ ‘ಮಿಯಾಮಿ ಹೆರಾಲ್ಡ್’ಗೆ ತಿಳಿಸಿದರು.