×
Ad

ಲೈಂಗಿಕ ಕಿರುಕುಳ ಆರೋಪ: ಪ್ರಶಸ್ತಿ ವಾಪಸ್ ನೀಡುವೆ ಎಂದ ತಮಿಳು ಕವಿ ವೈರಮುತ್ತು

Update: 2021-05-30 19:54 IST
photo: facebook

ಹೊಸದಿಲ್ಲಿ: ಹಲವು ಮಹಿಳೆಯರಿಂದ  ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ತಮಿಳು ಕವಿ ವೈರಮುತ್ತು ಒಎನ್‌ವಿ ಸಾಹಿತ್ಯ ಪ್ರಶಸ್ತಿಯನ್ನು ‘ಹಿಂದಿರುಗಿಸಲಿದ್ದೇನೆ’ ಎಂದು ಘೋಷಿಸಿದ್ದಾರೆ.

ಈ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಕವಿ, ದಿವಂಗತ ಒ.ಎನ್.ವಿ. ಕುರುಪ್  ಅವರ ಸ್ಮರಣಾರ್ಥ ಸ್ಥಾಪಿಸಲಾಗಿದೆ.  ವೈರಮುತ್ತು ಅವರನ್ನು ಈ ವರ್ಷ ಈ ಪ್ರಶಸ್ತಿಗೆ ಹೆಸರಿಸಲಾಗಿತ್ತು.

ಪ್ರಶಸ್ತಿ ತೀರ್ಪುಗಾರರರು  ಮುಜುಗರವನ್ನು ಎದುರಿಸುವುದನ್ನುನಾನು ಬಯಸುವುದಿಲ್ಲ . ಒಎನ್‌ವಿ ಕಲ್ಚರಲ್ ಅಕಾಡೆಮಿಯು ಪ್ರಶಸ್ತಿಗೆ ತನ್ನ  ನಾಮನಿರ್ದೇಶನವನ್ನು ಮರುಪರಿಶೀಲಿಸುವ ನಿರ್ಧಾರಕ್ಕೆ ಬಂದಿರುವುದು ಹಗೆತನವಾಗಿದೆ ಎಂದು ವೈರಮುತ್ತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News