ತೊಕ್ಕೊಟ್ಟು : ಆಟೋಮೊಬೈಲ್ ಅಂಗಡಿಯಲ್ಲಿ ಬೆಂಕಿ ಅವಘಡ

Update: 2021-05-31 06:28 GMT

ತೊಕ್ಕೊಟ್ಟು : ಇಲ್ಲಿನ ಆಟೋ ಮೊಬೈಲ್ ಅಂಗಡಿಯಲ್ಲಿ ಭಾರೀ ಬೆಂಕಿ ಅವಘಡ ಉಂಟಾದ ಘಟನೆ ಇದೀಗ ನಡೆದಿದೆ.

ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಕೊರಗಜ್ಜನ ಕಟ್ಟೆಯ ಸನಿಹದ ಕಟ್ಟಡದಲ್ಲಿ ಘಟನೆ ನಡೆದಿದ್ದು, ಕುಂಪಲ ನಿವಾಸಿ ಭರತ್ ಎಂಬವರಿಗೆ ಸೇರಿದ ದ್ವಿಚಕ್ರ ವಾಹನಗಳ ಆಟೋ ಮೊಬೈಲ್ಸ್ ಮಳಿಗೆ ಗೋಲ್ಡನ್ ಸ್ಟಾರ್ ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.

ಮುಚ್ಚಿದ್ದ ಅಂಗಡಿಯಲ್ಲಿ ದಟ್ಟವಾಗಿ ಹೊಗೆ ಆವರಿಸಿರುವುದನ್ನು ಕಂಡ ಸ್ಥಳೀಯರು ಶಟರ್ ತೆರೆದು ನೋಡಿದಾಗ ಬೆಂಕಿ ತಗಲಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಸೇರಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಬೆಂಕಿ ಅಂಗಡಿಗೆ ಸಂಪೂರ್ಣ ವ್ಯಾಪಿಸಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ, ಘಟನಾ ಸ್ಥಳದಲ್ಲಿ ಜಮಾಯಿಸಿರುವ ಮಂದಿಯನ್ನು ಉಳ್ಳಾಲ ಠಾಣೆ ಪೊಲೀಸರು ಚದುರಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News