×
Ad

43 ಕೆ.ಜಿ ದೇಹದ ತೂಕ ಹೇಗೆ ಕಳೆದುಕೊಂಡೆ ಎಂಬ ಕುರಿತು ಫೇಸ್ ಬುಕ್ ಪೋಸ್ಟ್ ಹಂಚಿಕೊಂಡ ಐಪಿಎಸ್ ಅಧಿಕಾರಿ

Update: 2021-06-01 12:37 IST
photo: vivekrajsinghkukrele1/Instagram

ಹೊಸದಿಲ್ಲಿ: ಐಪಿಎಸ್ ಅಧಿಕಾರಿ ವಿವೇಕ್ ರಾಜ್ ಸಿಂಗ್ ಕುಕ್ರೆಲೆ ಅವರು ರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ (ಎನ್ ಪಿಎ )ಸೇರ್ಪಡೆಯಾದಾಗ 134 ಕೆಜಿ ತೂಕ ಹೊಂದಿದ್ದರು. ಕೊನೆಯ ಬಾರಿಗೆ ಅವರು 8 ನೇ ತರಗತಿಯಲ್ಲಿದ್ದಾಗ ತಮ್ಮ ತೂಕವನ್ನು ಪರಿಶೀಲಿಸಿದಾಗ  88 ಕೆಜಿ ಭಾರವಿದ್ದರು. 

ಎನ್ ಪಿಎ ಯಲ್ಲಿ 46 ವಾರಗಳ ಕಠಿಣ ತರಬೇತಿಯ ನಂತರ, ತಾನು ಅಂತಿಮವಾಗಿ 104 ಕೆಜಿ ತೂಕದೊಂದಿಗೆ ಹೊರಬಂದೆ ಎಂದು ವಿವೇಕ್ ರಾಜ್ ಫೇಸ್ಬುಕ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಎನ್ ಪಿಎ ಯಲ್ಲಿ ತೂಕವನ್ನು ಕಳೆದುಕೊಳ್ಳುವುದು ಒಂದು “ದೊಡ್ಡ ಸಾಧನೆ” ಎಂದು ಬರೆದಿರುವ  ವಿವೇಕ್ ರಾಜ್ ತನ್ನ ತೂಕ ಇಳಿಸುವ ಪ್ರಯಾಣವನ್ನು ದಾಖಲಿಸಿದ್ದಾರೆ 
ಹೊ್ಟ್ಟೆ ತುಂಬಿದ ನಂತರವೂ ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಅದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಚಾರವನ್ನು ವಿವೇಕ್ ರಾಜ್  ಅರಿತುಕೊಂಡರು.  ತೂಕ ಹೆಚ್ಚಳದಿಂದಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೆ ಹಾಗೂ  ಔಷಧಿಗಳನ್ನು ತೆಗೆದುಕೊಳ್ಳಬೇಕಾಯಿತು  ಎಂದು ಪೊಲೀಸ್ ಅಧಿಕಾರಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ತರಬೇತಿಯ ಸಮಯದಲ್ಲಿ ಸಾಕಷ್ಟು ತೂಕ ನಷ್ಟದ ನಂತರ, ವಿವೇಕ್ ರಾಜ್  ತಮ್ಮ  ಸೇವೆಯ ಆರಂಭಿಕ ವರ್ಷಗಳಲ್ಲಿ ಮತ್ತೆ ತೂಕವನ್ನು ಹೆಚ್ಚಿಸಿಕೊಂಡಿದ್ದರು. “ನಾನು 138 ಕೆಜಿ ವರೆಗೆ ತಲುಪಿದೆ. ನಾನು ಬಹಳಷ್ಟು ತಿನ್ನುತ್ತಿದ್ದೆ. ‘ಖಾನಾ ಫೆಖ್ನಾ ನಹಿ ಚಾಹಿಯೆ’ (ಆಹಾರವನ್ನು ಎಸೆಯಬಾರದು) ಎನ್ನುವುದು ಯಾವಾಗಲೂ ನನ್ನ ಧ್ಯೇಯವಾಕ್ಯವಾಗಿದೆ.  ಮನಸ್ಸಿನ ಅನ್ವಯವಿಲ್ಲದೆ ತಿನ್ನುವುದು ಹಾಗೂ ಹೊಟ್ಟೆ ತುಂಬಿರುವಾಗಲೂ ತಿನ್ನುವುದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ  ”ಎಂದು ಅವರು ಬರೆದಿದ್ದಾರೆ.

ಐಪಿಎಸ್ ಅಧಿಕಾರಿ ಎಂಟರಿಂದ ಒಂಬತ್ತು ಕೆಜಿ ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾದರು ಹಾಗೂ  ಸುಮಾರು ಒಂಬತ್ತು ವರ್ಷಗಳ ಕಾಲ ತಮ್ಮ ತೂಕವನ್ನು 130 ಕೆಜಿಯಲ್ಲಿ ಉಳಿಸಿಕೊಂಡಿದ್ದಾರೆ.

 “ವಾಕಿಂಗ್ ಜೀವನದ ಒಂದು ಭಾಗವಾಯಿತು ಹಾಗೂ  ನಾನು ತೂಕವನ್ನು ಕಡಿಮೆ ಮಾಡಲು ಆರಂಭಿಸಿದೆ. ಕ್ರಮೇಣ ತೂಕ ಇಳಿಕೆಯು ತರಬೇತಿಯನ್ನು ಹೆಚ್ಚಿಸಲು ನೆರವಾಯಿತು. ತೂಕ ಇಳಿಕೆಯಿಂದಾಗಿ ಈಗ ನನ್ನ ಬಿಪಿ ಸಾಮಾನ್ಯವಾಗಿದೆ'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News