×
Ad

ವಿಶ್ವದಲ್ಲೇ ಪ್ರಥಮ ಪ್ರಕರಣ: ಮನುಷ್ಯರಿಗೆ ಹರಡುವ ಹಕ್ಕಿಜ್ವರ ಸೋಂಕು ಚೀನಾದಲ್ಲಿ ಪತ್ತೆ

Update: 2021-06-01 14:03 IST
photo: Outlook 

ಬೀಜಿಂಗ್: ಚೀನಾದ ಪೂರ್ವ ಜಿಯಾಂಗ್ ಸುವಿ ಪ್ರಾಂತ್ಯದಲ್ಲಿ 41ರ ವಯಸ್ಸಿನ ವ್ಯಕ್ತಿಯೊಬ್ಬರಲ್ಲಿ ಎಚ್ 10 ಎನ್ 3 ತಳಿಯ ಹಕ್ಕಿ ಜ್ವರ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಈ ತಳಿಯಿಂದ ಸೋಂಕಿಗೆ ಒಳಪಟ್ಟ ಮೊದಲ ಮಾನವ ಪ್ರಕರಣ ಇದಾಗಿದೆ ಎಂದು ಚೀನದ ರಾಷ್ಟ್ರೀಯ ಆರೋಗ್ಯ ಆಯೋಗ(ಎನ್ ಎಚ್ ಸಿ)ಮಂಗಳವಾರ ತಿಳಿಸಿದೆ.

ಜೆನ್ ಜಿಯಾಗ್ ನಗರದ ನಿವಾಸಿಯಾದ ಆ ವ್ಯಕ್ತಿಯು ಜ್ವರ ಹಾಗೂ ಇತರ ರೋಗ ಲಕ್ಷಣಗಳಿಂದ ಎಪ್ರಿಲ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎಚ್ 10 ಎನ್ 3 ತಳಿಯ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿದೆ. ಆ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಎನ್ ಎಚ್ ಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಆದರೆ ಆ ವ್ಯಕ್ತಿಗೆ ಹೇಗೆ ಸೋಂಕು ತಗಲಿದೆ ಎಂಬುದರ ವಿವರಗಳನ್ನು ಆಯೋಗ ನೀಡಿಲ್ಲ.

ಎಚ್ 10 ಎನ್ 3ಕಡಿಮೆ ರೋಗಕಾರಕ. ಕೋಳಿಗಳಲ್ಲಿ ಕಂಡುಬರುವ ಈ ವೈರಸ್ ತಳಿ ವ್ಯಾಪಕವಾಗಿ ಹರಡುವ ಸಾಧ್ಯತೆ ತೀರ ಕಡಿಮೆ ಎಂದು ಎನ್ ಎಚ್ ಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News