×
Ad

ವಸುಂಧರಾ ರಾಜೆ ವಿತರಿಸಿದ ಉಚಿತ ಆಹಾರ ಪ್ಯಾಕೆಟ್ ನಲ್ಲಿ ಪ್ರಧಾನಿ ಮೋದಿ ಚಿತ್ರವಿಲ್ಲ

Update: 2021-06-01 15:10 IST
photo: twitter

  ಕೋಟಾ: ಮೂರು ದಿನಗಳ ಹಿಂದೆ ‘ವಸುಂಧರಾ ಜನ್ ರಸೋಯಿ’ ಯಿಂದ ಇಲ್ಲಿ ಪ್ರಾರಂಭಿಸಲಾದ ಉಚಿತ ಆಹಾರ ಪ್ಯಾಕೆಟ್‌ಗಳ ವಿತರಣೆಯಲ್ಲಿ  ರಾಜಕೀಯ ಬಿರುಕು ಕಾಣಿಸಿಕೊಂಡಿದೆ.

ಈ ಯೋಜನೆಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ವಸುಂಧರಾ ರಾಜೆ ಅವರ ಹೆಸರಿನಲ್ಲಿ ಅವರ ವಿಶ್ವಾಸಾರ್ಹ ಮಾಜಿ ಶಾಸಕ ಪ್ರಹ್ಲಾದ್ ಗುಂಜಲ್ ಅವರು ಆರಂಭಿಸಿದ್ದರು.

'ವಸುಂಧರಾ ಜನ್  ರಸೊಯ್‌' ನಲ್ಲಿ ಪ್ರದರ್ಶಿಸಲಾಗಿರುವ ಬ್ಯಾನರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಒಳಗೊಂಡಂತೆ ಪಕ್ಷದ ಉನ್ನತ ನಾಯಕರ ಫೋಟೋಗಳು ಹಾಗೂ  ಹೆಸರುಗಳ ಅನುಪಸ್ಥಿತಿಯು ಹಲವು ರೀತಿಯ ಊಹಾಪೋಹಕ್ಕೆ ಕಾರಣವಾಗಿದೆ.

“ರಾಜೆಯ ಕರೆಯ ಮೇರೆಗೆ ನಾನು ಅದನ್ನು ಮೇ 28 ರಂದು ಆರಂಭಿಸಿದೆವು, ಅಲ್ಲಿ ನಾವು ಕೊಳೆಗೇರಿ ಪ್ರದೇಶಗಳು ಹಾಗೂ  ಹಳ್ಳಿಗಳಲ್ಲಿ ಉಚಿತ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದೇವೆ. ಒಂದು ದಿನದ ನಂತರ, ರಾಜೆಯ ಬೆಂಬಲಿಗರು ಹಲವಾರು ಜಿಲ್ಲೆಗಳಲ್ಲಿ ವಸುಂಧರಾ ಜನ್ ರಸೋಯಿ ಅವರನ್ನು ಪ್ರಾರಂಭಿಸಿದರು”ಎಂದು ಬಿಜೆಪಿ ಮಾಜಿ ಶಾಸಕ ಗುಂಜಲ್ ಹೇಳಿದರು.

“ರಾಜ್ಯದಲ್ಲಿ ರಾಜೆ ಅವರಿಗಿಂತ ದೊಡ್ಡ ನಾಯಕರಿಲ್ಲ. ಬ್ಯಾನರ್‌ನಲ್ಲಿರುವ ಅವರ ಫೋಟೋ ಪಕ್ಷದ ಎಲ್ಲಾ ಮುಖಂಡರು ಮತ್ತು ರಾಜ್ಯದ ಕಾರ್ಯಕರ್ತರಿಗೆ ಪರವಾಗಿದೆ'' ”ಎಂದು ಗುಂಜಲ್ ಹೇಳಿದರು.

ಝಲಾವರ್‌ನಲ್ಲಿ ಹಾಕಲಾಗಿರುವ  ಬ್ಯಾನರ್‌ಗಳಲ್ಲಿ ರಾಜೆ ಅವರ ಮಗ ದುಶ್ಯಂತ್ ಸಿಂಗ್‌ ಭಾವಚಿತ್ರವಿದೆ.

ರಾಜೆ ಬೆಂಬಲಿಗರು ಮಾತ್ರ ರಾಸೋಯ್ ಅನ್ನು ನಿರ್ವಹಿಸುತ್ತಿದ್ದಾರೆ ಎಂದಿರುವ ಬುಂಡಿಯ ಬಿಜೆಪಿ ಪದಾಧಿಕಾರಿ, ಬಿಜೆಪಿ ಕಾರ್ಯಕರ್ತರು ಇದರಿಂದ ಅಂತರವನ್ನುಕಾಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News