2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ನಲ್ಲಿ 14 ತಂಡಗಳಿಗೆ ಅವಕಾಶ

Update: 2021-06-01 16:57 GMT

ದುಬೈ: ಪುರುಷರ ಕ್ರಿಕೆಟ್ ವಿಶ್ವಕಪ್ 2027 ಹಾಗೂ  2031 ರಲ್ಲಿ ಮತ್ತೊಮ್ಮೆ 14 ತಂಡಗಳ ಪಂದ್ಯಾವಳಿಯಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ತಿಳಿಸಿದೆ.

ಕ್ರಿಕೆಟ್‌ನ ಜಾಗತಿಕ ಆಡಳಿತ ಮಂಡಳಿಯಾಗಿರುವ  ಐಸಿಸಿ ತನ್ನ ಜಾಗತಿಕ ವೇಳಾಪಟ್ಟಿಯನ್ನು 2024-2031ರವರೆಗೆ ಅನಾವರಣಗೊಳಿಸಿದ್ದು, ಇದರಲ್ಲಿ ಬದಲಾವಣೆಗಳನ್ನು ಘೋಷಿಸಲಾಯಿತು. ನಾಲ್ಕು ವರ್ಷಗಳ ಹಿಂದೆ 14 ತಂಡಗಳು ವಿಶ್ವಕಪ್ ನಲ್ಲಿ ಸ್ಪರ್ಧಿಸಿದ್ದವು. ಆದರೆ  2019 ರ ವಿಶ್ವಕಪ್‌ನಲ್ಲಿ ಕೇವಲ 10 ತಂಡಗಳು ಸ್ಪರ್ಧಿಸಿದ್ದು, ಆತಿಥೇಯ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

2027 ಹಾಗೂ  2031 ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ನಲ್ಲಿ 14 ತಂಡಗಳು ಸ್ಪರ್ಧಿಸಲಿವೆ. ವಿಶ್ವಕಪ್  54 ಪಂದ್ಯಗಳ ಟೂರ್ನಿಯಾಗಲಿದೆ. ಆದರೆ 2024, 2026, 2028 ಹಾಗೂ  2030 ರಲ್ಲಿ ನಿಗದಿಯಾಗಿರುವ  ಐಸಿಸಿ ಪುರುಷರ ಟ್ವೆಂಟಿ- 20 ವಿಶ್ವಕಪ್ ಅನ್ನು 20 ತಂಡಗಳಿಗೆ ವಿಸ್ತರಿಸಲಾಗುವುದು, 55 ಪಂದ್ಯಗಳು ಟೂರ್ನಿ ಆಗಿರಲಿದೆ ಎಂದು ಐಸಿಸಿ ಮಂಡಳಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News