×
Ad

ಭಾರತದಲ್ಲೂ ವಿದ್ಯುತ್ ಕೈಕೊಡುತ್ತದೆ ಎಂದು ನಾಗಾಲ್ಯಾಂಡ್ ಪೊಲೀಸ್ ಅಧಿಕಾರಿಗೆ ಹೇಳಿದ ಟಿವಿ ನಿರೂಪಕ ರಾಹುಲ್ ಕವಲ್!

Update: 2021-06-03 13:14 IST

Twitter/@IndiaToday
 

ಹೊಸದಿಲ್ಲಿ: ಪರಾರಿಯಾಗಿರುವ ಮೆಹುಲ್ ಚೋಕ್ಸಿ ಅವರನ್ನು ಕೇಂದ್ರೀಕರಿಸಿ ಜೂನ್ 2 ರಂದು ರಾತ್ರಿ 8.30 ಕ್ಕೆ ‘ಇಂಡಿಯಾ ಟುಡೆ’ ಸುದ್ದಿವಾಹಿನಿಯ ನಿರೂಪಕ ರಾಹುಲ್ ಕವಲ್ ಚರ್ಚೆಯನ್ನು ಆಯೋಜಿಸಿದ್ದರು. ಚರ್ಚಾ ಕಾರ್ಯಕ್ರಮದಲ್ಲಿ ಚೋಕ್ಸಿ ಪರ ವಕೀಲ, ಬರಹಗಾರ ಹಾಗೂ  ನಾಗಾಲ್ಯಾಂಡ್ ನ ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಿದ್ದರು.

ಪೊಲೀಸ್ ಅಧಿಕಾರಿ, ರುಪಿನ್ ಶರ್ಮಾ ಅವರನ್ನು ರಾಹುಲ್ ಕವಲ್ ಚರ್ಚೆಗೆ ಆಹ್ವಾನಿಸಿದರು.

ಚೋಕ್ಸಿ ಪ್ರಕರಣದಲ್ಲಿ ಸಂಭವನೀಯ ಫಲಿತಾಂಶಗಳು ಏನಾಗಬಹುದು ಎಂಬ ಕವಲ್ ಅವರ ಪ್ರಶ್ನೆಗೆ ಶರ್ಮಾ ಉತ್ತರಿಸುತ್ತಿದ್ದಂತೆ, ಅವರ ಪರದೆ  ಕಪ್ಪು ಬಣ್ಣಕ್ಕೆ ತಿರುಗಿತು. “ರಾಹುಲ್ ನನ್ನ ವಿದ್ಯುತ್ ಸ್ಥಗಿತಗೊಂಡಿದೆ" ಎಂದು ಶರ್ಮಾ ಹೇಳಿದರು.

"ಚಿಂತಿಸಬೇಡಿ, ನೀವು ನಾಗಾಲ್ಯಾಂಡ್ನಲ್ಲಿದ್ದೀರಿ, ಭಾರತದಲ್ಲಿಯೂ ವಿದ್ಯುತ್ ಸ್ಥಗಿತಗೊಳ್ಳುತ್ತದೆ, ದಯವಿಟ್ಟು ರುಪಿನ್ ಮಾತನಾಡುವುದನ್ನು ಮುಂದುವರಿಸಿ, ನೀವು ಹೇಳುತ್ತಿರುವುದನ್ನು ನಾವು ಕೇಳುತ್ತೇವೆ." ಎಂದು ಕವಲ್ ಉತ್ತರಿಸಿದರು.

ಶರ್ಮಾ ಅವರು ರಾಹುಲ್ ಮಾತಿಗೆ ಉತ್ತರಿಸದೇ ಚೋಕ್ಸಿ ಪ್ರಕರಣದ ಬಗ್ಗೆ ಮಾತನಾಡುತ್ತಾ ಹೋದರು.

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿರುವ  ತನ್ನ ಸ್ಟುಡಿಯೊದಲ್ಲೂ ಕೂಡ ವಿದ್ಯುತ್ ಕೈಕೊಡುತ್ತದೆ ಎಂದು ಹೇಳುವುದು ಕವಲ್ ಅವರ ಮಾತಿನ ಅರ್ಥವಾಗಿರಬಹುದು, ಅವರ ಮಾತು ಖಂಡಿತವಾಗಿಯೂ ಭಾರತ ಎನ್ನುವ ಅರ್ಥದಲ್ಲಿರುವ ಸಾಧ್ಯತೆ ಇಲ್ಲ. ನಾಗಾಲ್ಯಾಂಡ್ ಭಾರತದ ಭಾಗವಾಗಿದೆ ಎನ್ನುವುದು ವಾಸ್ತವ ಎಂದು News laundry ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News