ಬುಡಾಪೆಸ್ಟ್ ರಸ್ತೆಗಳಿಗೆ ಉಯಿಘರ್, ಹಾಂಕಾಂಗ್, ದಲಾಯಿ ಹೆಸರುಗಳಲ್ಲಿ ಮರುನಾಮಕರಣ

Update: 2021-06-03 14:56 GMT

ಬುಡಾಪೆಸ್ಟ್ (ಹಂಗೇರಿ), ಜೂ. 3: ಚೀನಾ ನಡೆಸುತ್ತಿದೆಯೆನ್ನಲಾದ ಮಾನವಹಕ್ಕು ಉಲ್ಲಂಘನೆಯನ್ನು ಪ್ರತಿಭಟಿಸುವುದಕ್ಕಾಗಿ ಹಂಗೇರಿ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಚೀನಾ ವಿಶ್ವವಿದ್ಯಾನಿಲಯದ ಸಮೀಪದ ರಸ್ತೆಗಳಿಗೆ ಮರುನಾಮಕರಣ ಮಾಡುವುದಾಗಿ ಬುಡಾಪೆಸ್ಟ್ ಮೇಯರ್ ಗರ್ಗೆಲಿ ಕರಕ್ಸೋನಿ ಬುಧವಾರ ಹೇಳಿದ್ದಾರೆ.

ಒಂದು ರಸ್ತೆಗೆ ಟಿಬೆಟ್‌ನ ದೇಶಭ್ರಷ್ಟ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರ ಹೆಸರು ಇಡಲಾಗುವುದು. ಚೀನಾವು ಅವರನ್ನು ಅಪಾಯಕಾರಿ ಪ್ರತ್ಯೇಕತಾವಾದಿ ಎಂಬುದಾಗಿ ಬಣ್ಣಿಸುತ್ತಿದೆ. ಇನ್ನೊಂದು ರಸ್ತೆಗೆ ‘ಉಯಿಘರ್ ಹುತಾತ್ಮರ ರಸ್ತೆ’ ಎಂಬುದಾಗಿ ಹೆಸರಿಡಲಾಗುವುದು. ಉಯಿಘರ್‌ಗಳು ಚೀನಾದ ಪ್ರಧಾನ ಮುಸ್ಲಿಮ್ ಜನಾಂಗೀಯ ಗುಂಪಾಗಿದ್ದಾರೆ. ಚೀನಾವು ಉಯಿಘರ್ ಮುಸ್ಲಿಮರ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ ಎಂಬುದಾಗಿ ಅಮೆರಿಕ ಮತ್ತು ಇತರ ಹಲವು ದೇಶಗಳು ಭಾವಿಸಿವೆ. ಮೂರನೇ ರಸ್ತೆಗೆ ‘ಫ್ರೀ ಹಾಂಕಾಂಗ್ ರಸ್ತೆ’ ಎಂಬುದಾಗಿ ನಾಮಕರಣ ಮಾಡಲಾಗುವುದು. ನಾಲ್ಕನೇ ರಸ್ತೆಗೆ ಜೈಲಿನಲ್ಲಿರುವ ಚೀನಾದ ಕೆಥೋಲಿಕ್ ಬಿಶಪ್ ಒಬ್ಬರ ಹೆಸರನ್ನು ಇಡಲಾಗುತ್ತದೆ ಎಂದು ಉದಾರವಾದಿ ಮೇಯರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News