×
Ad

ಗ್ರೀನ್ ಕಾರ್ಡ್ ವಿತರಣೆಯಲ್ಲಿ ದೇಶಾವಾರು ಮಿತಿ ತೆಗೆದಹಾಕುವ ಮಸೂದೆ ಮಂಡನೆ

Update: 2021-06-03 20:37 IST

ವಾಶಿಂಗ್ಟನ್, ಜೂ. 3: ಉದ್ಯೋಗಾಧಾರಿತ ಗ್ರೀನ್ ಕಾರ್ಡ್ ವಿತರಣೆಯಲ್ಲಿ ದೇಶಾವಾರು ಮಿತಿಯನ್ನು ತೆಗೆದುಹಾಕುವ ಉದ್ದೇಶದ ಮಸೂದೆಯೊಂದನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬುಧವಾರ ಮಂಡಿಸಲಾಗಿದೆ. ಆಡಳಿತಾರೂಢ ಡೆಮಾಕ್ರಟಿಕ್ ಮತ್ತು ಪ್ರತಿಪಕ್ಷ ರಿಪಬ್ಲಿಕನ್ ಪಕ್ಷಗಳ ಬೆಂಬಲ ಹೊಂದಿರುವ ಮಸೂದೆಯನ್ನು ಸಂಸದೆ ರೆ ಲೋಫ್‌ಗ್ರೆನ್ ಮತ್ತು ಸಂಸದ ಜಾನ್ ಕರ್ಟಿಸ್ ಮಂಡಿಸಿದರು.

ಅಮೆರಿಕದಲ್ಲಿ ಖಾಯಂ ಆಗಿ ವಾಸಿಸಲು ಅವಕಾಶ ಮಾಡಿಕೊಡುವ ಗ್ರೀನ್ ಕಾರ್ಡ್ ವಿತರಣೆಯಲ್ಲಿ ದೇಶಾವಾರು ಮಿತಿಯನ್ನು ತೆಗೆದುಹಾಕಿದರೆ, ಗ್ರೀನ್ ಕಾರ್ಡ್‌ಗಳಿಗಾಗಿ ದಶಕಗಳಿಂದ ಕಾಯುತ್ತಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

ಉದ್ಯೋಗಾಧಾರಿತ ವಲಸೆ ವೀಸಾ ವಿತರಣೆ ಮೇಲಿನ 7 ಶೇಕಡ ದೇಶಾವಾರು ಮಿತಿಯನ್ನು ಹಂತ ಹಂತವಾಗಿ ತೆಗೆದುಹಾಕುವ ಗುರಿಯನ್ನು ‘ಇಕ್ವಾಲ್ ಎಕ್ಸೆಸ್ ಟು ಗ್ರೀನ್ ಕಾರ್ಡ್ಸ್ ಫಾರ್ ಲೀಗಲ್ ಎಂಪ್ಲಾಯ್‌ಮೆಂಟ್ (ಈಗಲ್) ಆ್ಯಕ್ಟ್, 2021 ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News