ಭಾರತದಲ್ಲಿ ಕೋವಿಡ್ 2ನೇ ಅಲೆ ಹೆಚ್ಚು ಸಾಂಕ್ರಾಮಿಕವಾಗಲು ಡೆಲ್ಟಾ ರೂಪಾಂತರ ಕಾರಣ: ಅಧ್ಯಯನ
Update: 2021-06-04 10:56 IST
ಹೊಸದಿಲ್ಲಿ: ಭಾರತದಲ್ಲಿ ಮೊದಲಿಗೆ ಪತ್ತೆಯಾಗಿರುವ ಕೊರೋನವೈರಸ್ ರೂಪಾಂತರ ಅಥವಾ ಡೆಲ್ಟಾ ರೂಪಾಂತರವು ದೇಶದ ಎರಡನೇ ಕೋವಿಡ್ ಅಲೆ ಹೆಚ್ಚು ಉಲ್ಬಣಕ್ಕೆ ಕಾರಣವಾಗಿದೆ ಎಂದು ಸರಕಾರದ ಅಧ್ಯಯನವು ಕಂಡುಹಿಡಿದಿದೆ.
ಡೆಲ್ಟಾ ರೂಪಾಂತರ - ಅಥವಾ ಬಿ .1.617.2 ತಳಿ ಬ್ರಿಟನ್ ನ ಕೆಂಟ್ ನಲ್ಲಿ ಮೊದಲು ಪತ್ತೆಯಾದ ಆಲ್ಫಾ ರೂಪಾಂತರಕ್ಕಿಂತ "ಹೆಚ್ಚು ಸಾಂಕ್ರಾಮಿಕ" ಎಂದು ಭಾರತೀಯ ಸಾರ್ಸ್ ಕೋವ್2 ಜೀನೋಮಿಕ್ ಕನ್ಸೋರ್ಟಿಯಾ ಹಾಗೂ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಧ್ಯಯನದಿಂದ ತಿಳಿದುಬಂದಿದೆ.
ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕಿಂತ ಶೇಕಡಾ 50 ರಷ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಅಧ್ಯಯನ ಹೇಳುತ್ತದೆ.