×
Ad

43,000 ಕೋ.ರೂ.ವೆಚ್ಚದಲ್ಲಿ ಆರು ಸ್ವದೇಶಿ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಯೋಜನೆಗೆ ಹಸಿರು ನಿಶಾನೆ

Update: 2021-06-04 20:38 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.4: ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕಾಗಿ 43,000 ಕೋ.ರೂ.ಗಳ ವೆಚ್ಚದ ‘ಮೇಕ್ ಇನ್ ಇಂಡಿಯಾ ’ಯೋಜನೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ರಕ್ಷಣಾ ಉಪಕರಣಗಳ ಖರೀದಿ ಮಂಡಳಿ(ಡಿಎಸಿ)ಯು ಒಪ್ಪಿಗೆಯನ್ನು ನೀಡಿದೆ.

ವ್ಯೆಹಾತ್ಮಕ ಪಾಲುದಾರಿಕೆ ಮಾದರಿಯಡಿ ಪಿ75(1) ಯೋಜನೆಯ ಪ್ರಸಾವಕ್ಕೆ ಡಿಎಸಿ ಅನುಮತಿಯನ್ನು ನೀಡಿದ್ದು,ಇದು ಈ ಮಾದರಿಯಡಿ ಇಂತಹ ಮೊದಲ ಮಿಲಿಟರಿ ಉಪಕರಣ ಖರೀದಿಯಾಗಿದೆ ಎಂದು ಸರಕಾರವು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ಯೋಜನೆಯು ಭಾರತವು ತನ್ನ 30 ವರ್ಷಗಳ ಜಲಾಂತರ್ಗಾಮಿ ನಿರ್ಮಾಣ ಕಾರ್ಯಕ್ರಮದಲ್ಲಿ ಗುರಿಗಳನ್ನು ಸಾಧಿಸಲು ನೆರವಾಗಲಿದೆ ಎಂದು ಅದು ಹೇಳಿದೆ.

ಯೋಜನೆಯಡಿ ಮೊದಲ ಜಲಾಂತರ್ಗಾಮಿ ನೌಕೆಯು ಭಾರತೀಯ ನೌಕಾಪಡೆಯಲ್ಲಿ ಸೇರ್ಪಡೆಗೊಳ್ಳಲು ಕನಿಷ್ಠ ಏಳು ವರ್ಷ ಕಾಯಬೇಕಿದೆ.

6,000 ಕೋ.ರೂ.ಅಂದಾಜು ವೆಚ್ಚದಲ್ಲಿ ಭಾರತೀಯ ಸೇನೆಗಾಗಿ ಏರ್ ಡಿಫೆನ್ಸ್ ಗನ್‌ಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಇತರ ಹಲವಾರು ರಕ್ಷಣಾ ಖರೀದಿಗಳನ್ನೂ ಡಿಎಸಿ ಅನುಮೋದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News