ಬೆಳ್ತಂಗಡಿ : ಸೂರ್ಯನ ಸುತ್ತ ಚಿನ್ನದ ಬಣ್ಣದ ವೃತ್ತ

Update: 2021-06-06 17:03 GMT

ಬೆಳ್ತಂಗಡಿ; ಸೂರ್ಯನ ಸುತ್ತ ಚಿನ್ನದ ಬಣ್ಣದ ವೃತ್ತವೊಂದು ರವಿವಾರ ಕಾಣಿಸಿಕೊಂಡಿದ್ದು ಜನರಲ್ಲಿ ಕುತೂಹಲ ಮೂಡಿಸಿದೆ.

ಧರ್ಮಸ್ಥಳ ಪರಿಸರದಲ್ಲಿ ಹನ್ನೊಂದು ಗಂಟೆಯ ಸುಮಾರಿಗೆ ಇದು ಕಾಣಿಸಿಕೊಂಡಿದೆ. ಬೆಳಿಗ್ಗೆ ಈ ಪ್ರದೇಶದಲ್ಲಿ ಮಳೆ ಇತ್ತು ಆದರೆ ಒಂಬತ್ತು ಗಂಟೆಯ ಬಳಿಕ ಮಳೆ ನಿಂತು ಬಿಸಿಲು ಕಾಣಿಸಿಕೊಂಡಿತ್ತು. ಹನ್ನೊಂದು ಗಂಟೆಯ ಬಳಿಕ ಸೂರ್ಯನ ಸುತ್ತ ಚಿನ್ನದ ಬಣ್ಣದ ವೃತ್ತವನ್ನು ಜನರು ನೋಡಿದ್ದಾರೆ. ಸುಮಾರು ಆರ್ಧ ಗಂಟೆಯ ಕಾಲ ಇದು ಮುಂದುವರಿದಿತ್ತು. ಇದರ ಫೊಟೋಗಳು ವಾಟ್ಸಪ್ ಮೂಲಕ ಹಾಗೂ ಸಮಾಜಿಕ ಜಾಲತಾಣಗಳ ಮೂಲಕ ಹರಿದಾಡಿದೆ. ಯಾವ ಕಾರಣದಿಂದಾಗಿ ಈ ರೀತಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿಲ್ಲ. ಹಿಂದೆಯೂ ಇದೇ ರೀತಿ 2019ರ ಅಕ್ಟೋಬರ್ ತಿಂಗಳಿ‌ನಲ್ಲಿಯೂ ಕಾಣಿಸಿಕೊಂಡಿತ್ತು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News