×
Ad

ಹೊಸ ಇ-ಫೈಲಿಂಗ್ ವೆಬ್ ತಾಣದಲ್ಲಿ ಸಮಸ್ಯೆಗಳ ಮಹಾಪೂರ: ಇನ್ಫೋಸಿಸ್‍ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ ವಿತ್ತ ಸಚಿವೆ

Update: 2021-06-08 16:58 IST

ಹೊಸದಿಲ್ಲಿ : ಸೋಮವಾರ ಕಾರ್ಯಾರಂಭಗೊಂಡ ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ವೆಬ್‍ಸೈಟ್‍ನ ಹಲವಾರು ಬಳಕೆದಾರರಿಂದ ಬಹಳಷ್ಟು ದೂರುಗಳು ಬಂದ ನಂತರ  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಟಿ ಕಂಪೆನಿ ಇನ್ಫೋಸಿಸ್ ಹಾಗೂ ಅದರ ಸಹ-ಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಅವರನ್ನು ಟ್ಯಾಗ್ ಮಾಡಿದ್ದಾರೆ.

"ಬಹು ನಿರೀಕ್ಷಿತ ಇ-ಫೈಲಿಂಗ್ ಪೋರ್ಟಲ್ 2.0 ಕಳೆದ ರಾತ್ರಿ ಚಾಲನೆಗೊಂಡಿದೆ. ಆದರೆ ನನ್ನ ಟೈಮ್‍ಲೈನ್‍ನಲ್ಲಿ ಹಲವಾರು ದೂರುಗಳು ಹಾಗೂ ಲೋಪದೋಷಗಳನ್ನು ಕಾಣಿಸಲಾಗಿದೆ. ಒದಗಿಸಲಾಗುವ ಸೇವೆಗಳ ಗುಣಮಟ್ಟದ ವಿಚಾರದಲ್ಲಿ ತೆರಿಗೆ ಪಾವತಿದಾರರನ್ನು  ಇನ್ಫೋಸಿಸ್ ಹಾಗೂ ನಿಲೇಕಣಿ ಅವರು ಕೈಬಿಡಲಿಕ್ಕಿಲ್ಲ  ಎಂದು ನಂಬಿದ್ದೇನೆ. ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸುವುದು ನಮ್ಮ ಆದ್ಯತೆಯಾಗಬೇಕು" ಎಂದು ಸಚಿವೆ ಟ್ವೀಟ್ ಮಾಡಿದ್ದಾರೆ.

ಈ ಅತ್ಯಾಧುನಿಕ ಐಟಿ ಫೈಲಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಇನ್ಫೋಸಿಸ್‍ಗೆ 2019ರಲ್ಲಿ ಗುತ್ತಿಗೆ ನೀಡಲಾಗಿತ್ತು. ಪ್ರೊಸೆಸಿಂಗ್ ಸಮಯವನ್ನು 63 ದಿನಗಳಿಂದ ಒಂದು ದಿನಗಳಿಗೆ ಇಳಿಸಿ ರೀಫಂಡ್ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿತ್ತು.

ಆರಂಭಗೊಂಡಂದಿನಿಂದ ಹಲವಾರು  ಮಂದಿ ಬಳಕೆ ಮಾಡಲು ಆರಂಭಿಸಿದ ಜತೆಜತೆಗೆಯೇ  ಬಹಳಷ್ಟು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವಲ್ಲದೆ ಸಮಸ್ಯೆಗೊಳಗಾದವರು ಸಚಿವೆಗೆ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News