×
Ad

ಮುಂದಿನ ತಿಂಗಳು ಪಿಎಫ್ ಚಂದಾದಾರರ ಖಾತೆಗಳಿಗೆ ಶೇ.8.5 ಬಡ್ಡಿ ಜಮೆ ಸಾಧ್ಯತೆ

Update: 2021-06-08 21:19 IST

ಹೊಸದಿಲ್ಲಿ,ಜೂ.8: ನೌಕರರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್ಒ)ಯು ತನ್ನ ಆರು ಕೋಟಿಗೂ ಅಧಿಕ ಚಂದಾದಾರರ ಭವಿಷ್ಯನಿಧಿ ಖಾತೆಗಳಿಗೆ 2020-21ನೇ ಸಾಲಿಗಾಗಿ ಶೇ.8.5 ಬಡ್ಡಿಯನ್ನು ಶೀಘ್ರವೇ ಜಮಾ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿ.

ಇಪಿಎಫ್ಒ 2020-21ನೇ ಸಾಲಿಯಾಗಿ ಶೇ.8.5ರ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಚಂದಾದಾರರು ಹೆಚ್ಚು ಹಣವನ್ನು ಹಿಂದೆಗೆದುಕೊಳ್ಳುತ್ತಿರುವ ಮತ್ತು ಕಡಿಮೆ ವಂತಿಗೆಯನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಈ ನಿರ್ಧಾರವನ್ನು ಕೈಗೊಂಡಿದೆ.

ದೇಶದಲ್ಲಿ ಕೊರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಪಿಎಫ್ಒ ಕಳೆದ ಮಾರ್ಚ್ ನಲ್ಲಿ 2020-21ನೇ ಸಾಲಿಗಾಗಿ ಬಡ್ಡಿದರವನ್ನು ಏಳು ವರ್ಷಗಳಲ್ಲಿ ಕನಿಷ್ಠವಾದ ಶೇ.8.5ಕ್ಕೆ ತಗ್ಗಿಸಿತ್ತು. 2018-19ರಲ್ಲಿ ಶೇ.8.65 ಮತ್ತು 2017-18ರಲ್ಲಿ ಶೇ.8.55ರಷ್ಟು ಬಡ್ಡಿಯನ್ನು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News