ಪರಿಸರ ದಿನದಂದು ಯುವಕರು ನೆಟ್ಟ ಗಾಂಜಾ ಗಿಡಗಳನ್ನು ತೆರವುಗೊಳಿಸಿದ ಪೊಲೀಸರು

Update: 2021-06-08 17:17 GMT
photo: thenewsminute

ಕೊಲ್ಲಂ: ಜೂನ್‌ 5ರಂದು ವಿಶ್ವದಾದ್ಯಂತ ಹಲವಾರು ಮಂದಿ ಪರಿಸರ ದಿನವನ್ನು ಆಚರಿಸಿದ್ದು, ಹಲವು ಗಿಡಗಳನ್ನು ನೆಟ್ಟು ನೀರುಣಿಸಿದ್ದಾರೆ. ಈ ನಡುವೆ ಕೇರಳದ ಕೊಲ್ಲಂನ ಕಂಡಚ್ಚಿರ ಎಂಬ ಪ್ರದೇಶದಲ್ಲಿ ಪರಿಸರ ದಿನದ ಪ್ರಯುಕ್ತ ಕೆಲ ಯುವಕರು ಗಾಂಜಾ ಗಿಡಗಳನ್ನು ನೆಟ್ಟಿದ್ದು, ಬಳಿಕ ಪೊಲೀಸರು ಅದನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆಂದು ತಿಳಿದು ಬಂದಿದೆ.

ʼಪರಿಸರ ದಿನದಂದು ನಮಗಿಷ್ಟವಾದ ಗಿಡಗಳನ್ನು ನೆಡಬೇಕು, ಇದು ಇಲ್ಲಿ ಬೆಳೆಯಲಿʼ ಎಂದು ಯುವಕನೋರ್ವ ಗಿಡ ನೆಟ್ಟಿದ್ದಾಗಿ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆತ ಇನ್ನಿತರರಿಗೂ ಗಾಂಜಾ ಗಿಡ ನೆಡುವಂತೆ ಹೇಳಿದ್ದು, ಆತ ಓರ್ವ ಗಾಂಜಾ ವ್ಯಸನಿಯಾಗಿದ್ದಾನೆಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿಯ ಪ್ರಕಾರ ಸ್ಥಳಕ್ಕೆ ಆಗಮಿಸಿದ ಕೊಲ್ಲಂನ ಅಬಕಾರಿ ವಿಶೇಷ ದಳದ ಸರ್ಕಲ್‌ ಇನ್‌ ಸ್ಪೆಕ್ಟರ್‌ ನೌಶಾದ್‌ ಮತ್ತಿತರ ಪೊಲೀಸರು ಗಿಡಗಳನ್ನು ತೆರವುಗೊಳಿಸಿದ್ದಾರೆ. ಯುವಕರು ಗಿಡ ನೆಟ್ಟು ಫೋಟೊಗಳನ್ನು ಕ್ಲಿಕ್ಕಿಸಿ ಸ್ಥಳದಿಂದ ತೆರಳಿದ್ದಾರೆಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ. ಇದೇ ರೀತಿ ಮಾಂಙಾಡ್‌ ಬೈಪಾಸ್‌ ಬ್ರಿಡ್ಜ್‌ ಸಮೀಪವೂ ಗಾಂಜಾ ಗಿಡಗಳನ್ನು ನೆಡಲಾಗಿತ್ತು ಎಂದು thenewsminute ವರದಿ ಮಾಡಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News