‘ಕೆಲಸವಿಲ್ಲದ ಕಾರಣ’ ಕಳೆದ ವರ್ಷದ ಅರ್ಧದಷ್ಟು ತೆರಿಗೆಯನ್ನು ಪಾವತಿಸಲು ಸಾಧ್ಯವಾಗಿಲ್ಲ ಎಂದ ಕಂಗನಾ ರಣಾವತ್

Update: 2021-06-09 10:46 GMT
 Photo: Kangana Ranaut/Instagram

ಮುಂಬೈ: ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ ನಾನು ಎಂದು ಹೇಳಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಆದರೆ ‘ಕೆಲಸವಿಲ್ಲ’ ಎಂಬ ಕಾರಣದಿಂದಾಗಿ ಕಳೆದ ವರ್ಷದ ತೆರಿಗೆಯ ಅರ್ಧದಷ್ಟು ಹಣವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಬಾಕಿ ಇರುವ ಮೊತ್ತಕ್ಕೆ ಸರಕಾರವು ಬಡ್ಡಿ ವಿಧಿಸಿದರೆ ಆ ಕುರಿತು ಯೋಚಿಸುವುದಿಲ್ಲ ಎಂದು ಅವರು ಹೇಳಿದರು.

"ನಾನು ಅತ್ಯಧಿಕ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ಬಂದರೂ ನನ್ನ ಆದಾಯದ ಸುಮಾರು 45 ಪ್ರತಿಶತವನ್ನು ತೆರಿಗೆಯಾಗಿ ಪಾವತಿಸುತ್ತೇನೆ. ನಾನು ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ ಆಗಿದ್ದರೂ ಯಾವುದೇ ಕೆಲಸವಿಲ್ಲದ ಕಾರಣ ಜೀವನದಲ್ಲಿ ಮೊದಲ ಬಾರಿ ಕಳೆದ ವರ್ಷದ ತೆರಿಗೆಯ ಅರ್ಧದಷ್ಟು ಹಣವನ್ನು ಇನ್ನೂ ಪಾವತಿಸಲಿಲ್ಲ'' ಎಂದು ಇನ್ ಸ್ಟಾಗ್ರಾಮ್ ನಲ್ಲಿ ಕಂಗನಾ ಬರೆದುಕೊಂಡಿದ್ದಾರೆ.

"ನಾನು ವಿಳಂಬವಾಗಿ ತೆರಿಗೆ ಪಾವತಿಸುತ್ತಿದ್ದೇನೆ.  ಆದರೆ ಬಾಕಿ ಇರುವ ತೆರಿಗೆ ಹಣಕ್ಕೆ ಸರಕಾರ ನನಗೆ ಬಡ್ಡಿ ವಿಧಿಸುತ್ತಿದೆ, ಆದರೂ ನಾನು ಈ ಕ್ರಮವನ್ನು ಸ್ವಾಗತಿಸುತ್ತೇನೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News