×
Ad

ಲಸಿಕೆ ಪಡೆದವರಿಗೆ ಅಭಿನಂದನೆ: ಮಧ್ಯಪ್ರದೇಶ ಪೊಲೀಸರ ನಡೆಗೆ ಮೆಚ್ಚುಗೆ

Update: 2021-06-09 18:20 IST
photo: News 18

ಹೊಸದಿಲ್ಲಿ: ಮಧ್ಯಪ್ರದೇಶದ ನಿವಾರಿ ಜಿಲ್ಲೆಯಲ್ಲಿರುವ ಪೊಲೀಸರು ಕೊರೋನವೈರಸ್ ಲಸಿಕೆ ಪಡೆದವರನ್ನು ಅಭಿನಂದಿಸಲು ಹಾಗೂ  ಲಸಿಕೆ ಪಡೆಯದವರನ್ನು ಶೀಘ್ರವಾಗಿ ಲಸಿಕೆ ಪಡೆಯಲು ಒತ್ತಾಯಿಸುವ ಹೊಸ ಕಲ್ಪನೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

ಕೋವಿಡ್-19 ಲಸಿಕೆ ತೆಗೆದುಕೊಂಡ ಪ್ರಯಾಣಿಕರ ಮೇಲೆ "ನಾನು ಲಸಿಕೆ ಹಾಕಿಕೊಂಡಿರುವೆ. ನಾನು ದೇಶಭಕ್ತನಾಗಿದ್ದೇನೆ" ಎಂದು ಬರೆದಿರುವ ಬ್ಯಾಡ್ಜ್‌ಗಳನ್ನು ಪಿನ್ ಮಾಡುತ್ತಿರುವುದು ಕಂಡುಬಂದಿದೆ.

"ಲಸಿಕೆ ತೆಗೆದುಕೊಂಡವರನ್ನು ನಾವು ಗೌರವಿಸುತ್ತಿದ್ದೇವೆ ಹಾಗೂ  ಇಲ್ಲದವರಿಗೆ ಲಸಿಕೆ ಪಡೆಯಲು ಹೇಳುತ್ತಿದ್ದೇವೆ" ಎಂದು ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದ ವೀಡಿಯೊದಲ್ಲಿ ಒಬ್ಬ ಪೋಲೀಸ್ ಹೇಳುತ್ತಿದ್ದಾರೆ.

"ನಾನು ಲಸಿಕೆ ಸ್ವೀಕರಿಸಿದ್ದೇನೆ, ಅದಕ್ಕಾಗಿಯೇ ನನ್ನನ್ನು ಸನ್ಮಾನಿಸಲಾಗಿದೆ ಎಂದು ಜನರಿಗೆ ಹೇಳಿ " ಎಂದು ಪೋಲೀಸ್ ಕ್ಯಾಪ್ ಧರಿಸಿ ಬೈಕ್ ಸವಾರಿ ಮಾಡುತ್ತಿರುವ ವ್ಯಕ್ತಿಗೆ ಪೊಲೀಸರು ಹೇಳಿದರು.

ಇನ್ನೂ ಲಸಿಕೆ ಪಡೆಯದ ಜನರು  "ನಾನು ಇನ್ನೂ ನನ್ನ ಕೋವಿಡ್ ಲಸಿಕೆ ತೆಗೆದುಕೊಳ್ಳದ ಕಾರಣ ನನ್ನಿಂದ ದೂರವಿರಿ" ಎಂದು ಹೇಳುವ ಪೋಸ್ಟರ್ ಧರಿಸುವಂತೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News