×
Ad

ಸೆಗಣಿ ಮತ್ತು ಗೋಮೂತ್ರದಿಂದ ತಯಾರಿಸಿದ ಆಯುರ್ವೇದ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಕೇರಳ ಸರಕಾರ: ವರದಿ

Update: 2021-06-09 19:36 IST

ತಿರುವನಂತಪುರಂ: ಕೇರಳ ಸರಕಾರದ ಮಾಲಕತ್ವದಲ್ಲಿರುವ ಆಯುರ್ವೇದಿಕ್‌ ಔಷಧಿ ಕಂಪೆನಿಯಾಗಿರುವ ʼಔಷಧಿʼಯು ದನಗಳ ಸೆಗಣಿ ಮತ್ತು ಮೂತ್ರದಿಂದ ತಯಾರಿಸಿದ ʼಪಂಚಗವ್ಯ ಘ್ರುತಮ್‌ʼ ಅನ್ನು ಮಾರಾಟ ಮಾಡುತ್ತಿದೆ ಎಂದು deccanherald.com ವರದಿ ಮಾಡಿದೆ.

ಈ ಔಷಧವು ದನಗಳ ಸೆಗಣಿ, ಮೂತ್ರ, ದನದ ಹಾಲು, ತುಪ್ಪ ಮತ್ತು ಮೊಸರನ್ನು ಬಳಸಿ ತಯಾರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ʼಪಂಚಗವ್ಯ ಘ್ರುತಮ್‌ʼ ಬಳಸಿಕೊಂಡು ಮಾನಸಿಕ ಅನಾರೋಗ್ಯಗಳನ್ನು. ಜಾಂಡಿಸ್‌, ಜ್ವರ ಇನ್ನಿತರ ರೋಗಗಳನ್ನು ಗುಣಪಡಿಸಬಹುದು ಮತ್ತು ಇದು ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿನ್ನು ಹೆಚ್ಚಿಸುತ್ತದೆ ಎಂದು ʼಔಷಧಿʼ ಸಂಸ್ಥೆಯು ತಿಳಿಸಿದೆ.

ಕೇರಳ ಸರಕಾರದ ಈ ನಡೆಯು ಸದ್ಯ ಸಾಮಾಜಿಕ ತಾಣದಾದ್ಯಂತ ಚರ್ಚೆಗೀಡುಮಾಡಿದೆ.

ಕಳೆದ ವರ್ಷ ಕೇರಳ ಸರಕಾರವು ಗೋಮೂತ್ರದಿಂದ ತಯಾರಿಸಿದ ಆಯುರ್ವೇದಿಕ್‌ ಔಷಧಿಯನ್ನು ಕೋವಿಡ್‌ ಚಿಕಿತ್ಸೆಗೆ ಬಳಸಲು ಸಾಧ್ಯವೇ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸುವಂತೆ ತಿಳಿಸಿತ್ತು ಎಂದು ವರದಿ ಉಲ್ಲೇಖಿಸಿದೆ. 

ʼಔಷಧಿʼ ಸಂಸ್ಥೆಯು ದೇಶದ ಅತಿದೊಡ್ಡ ಸಾರ್ವಜನಿಕ ವಲಯ ಸಂಸ್ಥೆಯಾಗಿದೆ. 498 ಆಯುರ್ವೇದಿಕ್‌ ಫಾರ್ಮುಲಾಗಳನ್ನು ಉತ್ಪಾದಿಸುವ ಈ ಸಂಸ್ಥೆಯು ಪಂಚಕರ್ಮ ಆಸ್ಪತ್ರೆಯಲ್ಲಿ ವಿವಿಧ ಆಯುರ್ವೇದಿಕ್‌ ಚಿಕಿತ್ಸೆಗಳನ್ನು ನೀಡುತ್ತಿದೆ. 2015ರಲ್ಲಿ ಕೇರಳ ಸರಕಾರವು ʼಔಷಧಿʼ ಸಂಸ್ಥೆಯಿಂದ 82ಕೋಟಿ ರೂ. ಆದಾಯ ಗಳಿಸಿದ್ದು, ಲಾಭಾಂಶವು 10 ಕೋಟಿಯಿಂದ 23ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News