466 ಕೋಟಿ ರೂ.ವಂಚನೆ ಪ್ರಕರಣ: ಆವಂತ ಸಂಸ್ಥೆಯ ಸ್ಥಾಪಕ ಗೌತಮ್ ಥಾಪರ್ ವಿರುದ್ಧ ಪ್ರಕರಣ ದಾಖಲು
Update: 2021-06-09 20:13 IST
ಹೊಸದಿಲ್ಲಿ, ಜೂ.9: ಯೆಸ್ ಬ್ಯಾಂಕ್ ಗೆ ಸುಮಾರು 466 ಕೋಟಿ ರೂ. ಸಾಲ ಪಾವತಿಸದೆ ವಂಚಿಸಿದ ಪ್ರಕರಣದಲ್ಲಿ ಆವಂತ ಸಮೂಹ ಸಂಸ್ಥೆಗಳ ಸ್ಥಾಪಕ, ಕೋಟ್ಯಾಧಿಪತಿ ಗೌತಮ್ ಥಾಪರ್ಗೆ ಸಂಬಂಧಿಸಿದ ಸುಮಾರು 20 ಸ್ಥಳಗಳಿಗೆ ಸಿಬಿಐ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ.
ಥಾಪರ್ ನಿವಾಸ ಹಾಗೂ ಕಚೇರಿಯಿಂದ ಹಲವು ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದು ಥಾಪರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಥಾಪರ್, ರಘುಬೀರ್ ಕುಮಾರ್ ಶರ್ಮ, ರಾಜೇಂದ್ರ ಕುಮಾರ್ ಮಂಗಲ್, ತಾಪ್ಸಿ ಮಹಾಜನ್ ಮತ್ತು ಸಂಸ್ಥೆಗಳಾದ ಮೆ/ ಒಯಿಸ್ಟರ್ ಬಿಲ್ಡ್ವೆಲ್ ಪ್ರೈ.ಲಿ, ಆವಂತ ರಿಯಾಲ್ಟಿ ಪ್ರೈ.ಲಿ ಮತ್ತು ಝಬುವಾ ಪವರ್ ಲಿ.ಸಂಸ್ಥೆಯ ಅಜ್ಞಾತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.