×
Ad

ಕೇರಳದ ಕೆಪಿಸಿಸಿ ಅಧ್ಯಕ್ಷರಾಗಿ ಕೆ. ಸುಧಾಕರನ್ ನೇಮಕ

Update: 2021-06-09 22:35 IST
Photo credit: @SudhakaranINC

ತಿರುವನಂತಪುರಂ, ಜೂ.9: ಹಿರಿಯ ಕಾಂಗ್ರೆಸ್ ಮುಖಂಡ, ಕಣ್ಣೂರು ಸಂಸದ ಕೆ.ಸುಧಾಕರನ್ ಅವರನ್ನು ಕೇರಳ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಕೇರಳದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಹೈಕಮಾಂಡ್ಗೆ ವರದಿ ನೀಡಿದ್ದರು. ‌

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೂರವಾಣಿ ಕರೆ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಹಿರಿಯ ಮುಖಂಡರಾದ ಕೆ. ಮುರಳೀಧರನ್, ಪಿಟಿ ಥಾಮಸ್ ಅವರ ಹೆಸರನ್ನು ಕೆಲವರು ಪ್ರಸ್ತಾವಿಸಿದ್ದರು. 

ಆದರೆ ಹಿರಿಯ ಮುಖಂಡರಾದ ಉಮ್ಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಮತ್ತು ಎಂ ರಾಮಚಂದ್ರನ್ ಯಾರ ಹೆಸರನ್ನೂ ಪ್ರಸ್ತಾವಿಸಿರಲಿಲ್ಲ. ಕೆ.ಸುಧಾಕರನ್ ಅವರು ಹಾಲಿ ಅಧ್ಯಕ್ಷ ಎಂ ರಾಮಚಂದ್ರನ್ ಅವರ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ಸುಧಾಕರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News