ಮಂಗಳೂರು: ಕಸ್ಟಮರ್ ಕೇರ್ ಹೆಸರಿನಲ್ಲಿ ಮೊಬೈಲ್ ಸಿಮ್ ದಾಖಲೆ ಪಡೆದು 1.27 ಲಕ್ಷ ರೂ. ವಂಚನೆ

Update: 2021-06-10 17:43 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜೂ.10: ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಹೇಳಿದ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಸಿಮ್ ದಾಖಲೆಗಳನ್ನು ಕೇಳಿ 1.27ಲಕ್ಷ ರೂ.ವನ್ನು ಅಕ್ರಮವಾಗಿ ವರ್ಗಾವಣೆಗೊಳಿಸಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಐಸಿಐಸಿಐ ಬ್ಯಾಂಕ್ ಚಿಲಿಂಬಿಯಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಕ್ತಿಯ ಮೊಬೈಲ್‌ಗೆ ಸಿಮ್ ನವೀಕರಣ ದಾಖಲೆ ಕೇಳುವ ನೆಪದಲ್ಲಿ ಕಸ್ಟಮರ್ ಕೇರ್‌ನಿಂದ ಫೋನ್ ಮಾಡುತ್ತಿರುವುದಾಗಿ ಹೇಳಿದ ವ್ಯಕ್ತಿಯೊಬ್ಬ ರೀಚಾರ್ಜ್ ಮಾಡಲು ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸಿದ್ದಾನೆ.

ಅದರಂತೆ ಬ್ಯಾಂಕ್ ಗ್ರಾಹಕರು ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂ. 1,27,017 ರೂ. ವನ್ನು ಅನಧಿಕೃತವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿ ಮೋಸ ಮಾಡಿದ್ದಾನೆ ಎಂದು ನಗರ ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News