ಕೇರಳದಲ್ಲಿ ಜೂ.12, 13ರಂದು ಸಂಪೂರ್ಣ ಲಾಕ್ ಡೌನ್

Update: 2021-06-11 08:07 GMT
ಸಾಂದರ್ಭಿಕ ಚಿತ್ರ (source: PTI)

ಕಾಸರಗೋಡು, ಜೂ.11: ಕೋವಿಡ್-19 ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇರಳ ಸರಕಾರ, ರಾಜ್ಯದಲ್ಲಿ ಜೂ.16ರ ವರೆಗೆ ಲಾಕೌ ಡೌನ್ ವಿಸ್ತರಿಸಿದೆ. ಈ ನಡುವೆ ಜೂ.12 ಮತ್ತು 13ರಂದು ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.

ವಾರಾಂತ್ಯದ ಎರಡು ದಿನಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದೆ. ಹೋಟೆಲ್ ಗಳಲ್ಲಿ ಪಾರ್ಸೆಲ್ ಆಗಿ ತಿಂಡಿತಿನಿಸುಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ ಹೋಂ ಡೆಲಿವರಿಗೆ ಅವಕಾಶವಿರಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಲಾಕ್ಡೌನ್ ನಿಬಂಧನೆಗಳ ಅನ್ವಯ ಅನುಮತಿ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News