ದುಬೈ ಸುನ್ನಿ ಸೆಂಟರ್ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಬಾಖವಿ ಆಯ್ಕೆ

Update: 2021-06-11 14:33 GMT

ದುಬೈ : ದುಬೈ ಸರ್ಕಾರದ ಅಂಗೀಕೃತ ಇಸ್ಲಾಮಿಕ್ ವಿದ್ಯಾ ಸಂಸ್ಥೆ ಸುನ್ನಿ ಸೆಂಟರ್ ಫಾರ್ ಇಸ್ಲಾಮಿಕ್ ಎಜುಕೇಷನ್ ಇದರ ನೂತನ ಅಧ್ಯಕ್ಷರಾಗಿ ಸಮಸ್ತ ಕೇರಳ ಜಮೀಯತುಲ್ ಉಲೆಮಾ ಮುಶಾವರ ಸದಸ್ಯರಾದ  ಅಬ್ದುಲ್ ಸಲಾಂ ಬಾಖವಿ ಅವರು ಇತ್ತೀಚೆಗೆ ಆಯ್ಕೆಗೊಂಡರು.

ಅವರು ಇತ್ತೀಚೆಗೆ ಅಗಲಿದ ದುಬೈ ಸುನ್ನಿ ಸೆಂಟರ್ ಅಧ್ಯಕ್ಷ ಮರ್ಹೂಂ ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ ಅವರ ಸ್ಥಾನವನ್ನು ಅಲಂಕರಿಸಿದರು.

ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ರಾಜ್ಯ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲೀ ತಂಙಲ್ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News